ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಾಲಯದಲ್ಲಿ ಏಪ್ರಿಲ್ 9-10ರಂದು ಪೂಜಾ ಮಹೋತ್ಸವ

ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ಮಹಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಗೋಂದೋಳು ಪೂಜಾ ಮಹೋತ್ಸವವು ಏಪ್ರಿಲ್ 9 ಮತ್ತು 10ರಂದು ಭಕ್ತಿಭಾವದಿಂದ ನಡೆಯಲಿದೆ.

ಏಪ್ರಿಲ್ 9ರಂದು ಬೆಳಗ್ಗೆ ಗಣಪತಿ ಹೋಮ, ನಾಗಾರಾಧನೆ ಹಾಗೂ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಇರಲಿದ್ದು, ಸಂಜೆ ದೀಪಾರಾಧನೆ ಮತ್ತು ವಿಶೇಷ ಪೂಜಾ ವಿಧಿಗಳು ಜರುಗಲಿವೆ. ರಾತ್ರಿ ಅನ್ನಸಂತರ್ಪಣೆಯೂ ನಡೆಯಲಿದೆ.

ಏಪ್ರಿಲ್ 10ರಂದು ಬೆಳಿಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ರಿಂದ ನೂತನ ದ್ವಾರ ಉದ್ಘಾಟನೆ ನಡೆಯಲಿದ್ದು, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ .ಮಧ್ಯಾಹ್ನ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ವ್ಯವಸ್ಥೆ ಇರಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಜನೆ ಕಾರ್ಯಕ್ರಮಗಳು ನಡೆಯಲಿವೆ.

ಈ ಮಹೋತ್ಸವದಲ್ಲಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮ ಯಶಸ್ವಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!