ವಿಧಾನಸಭಾ ಚುನಾವಣೆಗೆ ವಾರಗಳಷ್ಟೇ ಬಾಕಿ ಎಣ್ಮಕಜೆ ಮುಂಡ್ಯತಡ್ಕ ಪಳ್ಳತ್‌ನಲ್ಲಿ ಎಕೆಎಂ ಅಶ್ರಫ್ ಕ್ಷೇತ್ರ ಪರ್ಯಟನೆಗೆ ಚಾಲನೆ

ಪೆರ್ಲ:ಬೇಸಿಗೆಯ ಬಿಸಿ ಸುಡುತ್ತಿರುವಾಗ ಕೇರಳ ವಿಧಾನಸಭಾ ಚುನಾವಣೆಯ ಬಿಸಿ ಮುಗಿಲು ಮುಟ್ಟಿದೆ.ಸುಡು ಬಿಸಿಲಿನಲ್ಲಿಯೂ ಪ್ರಚಾರ ಸಭೆ ಭರದಿಂದ ಸಾಗುತ್ತಿದೆ.ಕುತೂಹಲ ಮೂಡಿಸಿದ ಮಂಜೇಶ್ವರ ಕ್ಷೇತ್ರದಲ್ಲಿಯೂ ಚುನಾವಣಾ ಚಟುವಟಿಕೆ ಮುಂದುವರಿದಿದೆ.

ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ಕ್ಷೇತ್ರ ಪ್ರವಾಸವು ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಮುಂಡ್ಯತಡ್ಕ ಪಳ್ಳತ್ ನಲ್ಲಿ ಆರಂಭವಾಯಿತು.ಸಂಸದ ರಾಜ್ ಮೋಹನ್ ಉನ್ನಿಥಾನ್ ಉದ್ಘಾಟಿಸಿದರು.ಯುಡಿಎಫ್ ಕ್ಷೇತ್ರದ ಸಂಚಾಲಕ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಅಧ್ಯಕ್ಷ ಅಜೀಜ್ ಮೆರಿಕೆ ಸ್ವಾಗತಿಸಿದರು.ಪುತ್ತೂರು ಶಾಸಕ ಅಶೋಕ್ ರೈ, ಕರ್ನಾಟಕ ಪಿಸಿಸಿ ಕಾರ್ಯದರ್ಶಿ ಎ.ಎಸ್.ಮುಹಮ್ಮದ್ ಕುಂಞಿ, ಹಕೀಂ ಕುನ್ನಿಲ್, ಜೆ.ಎಸ್. ಸೋಮಶೇಖರ, ಟಿ.ಎ. ಮೂಸಾ, ಎಂ.ಅಬ್ಬಾಸ್, ಎ.ಕೆ. ಆರೀಫ್, ಹಾರಿಸ್ ಚೂರಿ, ಹರ್ಷಾದ್ ವರ್ಕಾಡಿ , ಯು.ಕೆ.ಸೈಫುಲ್ಲಾ ತಂಗಳ್, ಡಿ.ಎಂ.ಕೆ. ಮಹಮ್ಮದ್, ಲಕ್ಷ್ಮಣ ಪ್ರಭು, ಪದ್ಮನಾಭ ಪೂಜಾರಿ, ಕುಸುಮಾವತಿ, ಕೃಷ್ಣಪ್ರಸಾದ್ ರೈ, ಕರೀಂ ಕುಡುಪದವ್, ಹಾಡಿ ತಂಗಳ್ ಮೊಗ್ರಾಲ್, ಎಂ.ಪಿ. ಖಾಲಿದ್, ಅಬ್ದುಲ್ಲಾ ಮಾಡೇರಿ, ಅಬೂಬಕರ್ ಪೆರ್ದಾನ, ಸಿದ್ದೀಕ್ ಒಳಮುಗಾರ, ಝಡ್.ಎ. ಕಯ್ಯಾರ್, ಎ.ಎ. ಆಯಿಷಾ, ಸಿದ್ದೀಕ್ ದಂಡಗೋಳಿ, ಎ.ಕೆ. ಶರೀಫ್ ಬಿ.ಎಸ್. ಗಂಭೀರ್, ಟಿ.ಎಂ. ಹಮೀದಲಿ ಕಾಂತಲ್, ಅಬ್ದುಲ್ಲಾ ಕಂದತ್ತಿಲ್, ಇ.ಕೆ. ವಿವಿಧ ಕೇಂದ್ರಗಳಲ್ಲಿ ಮಹಮ್ಮದ್ ಕುಂಞಿ, ರಫೀಕ್ ಕಣ್ಣೂರು ಮಾತನಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!