ಸುರೇಶ್ ಗೋಪಿಗೆ ಹೈಕೋರ್ಟ್ ಶಾಕ್ ಸಂಸದ ಸ್ಥಾನ ರದ್ದು ಬೇಡಿಕೆ ಮನವಿ ಸ್ವೀಕಾರ

ಚಲನಚಿತ್ರ ನಟ, ಬಿಜೆಪಿ ನಾಯಕ, ಕೇಂದ್ರ ಸಹಸಚಿವ ಸುರೇಶ್ ಗೋಪಿ ಅವರ ತ್ರಿಶೂರಿನ ಸಂಸದ ಸ್ಥಾನವನ್ನು ಪ್ರಶ್ನಿಸಿ ಹೖಕೋರ್ಟಿಗೆ ಸಲ್ಲಿಸಲ್ಪಟ್ಟ ವಿಚಾರಣಾ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿ ಮಾನ್ಯತೆ ನೀಡಿದೆ. ತನ್ನ ಆಯ್ಕೆ ಪ್ರಶ್ನಿಸಿ ಸಲ್ಲಿಸಲ್ಪಟ್ಟ ಮನವಿ ಯನ್ನು ತಿರಸ್ಕರಿಸಬೇಕೆಂದು ವಿನಂತಿಸಿ ಸುರೇಶ್ ಗೋಪಿ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ತಿರಸ್ಕರಿಸಿ ಹೖಕೋರ್ಟು ಜಸ್ಟೀಸ್ ಕೌಸರ್ ಎಡಪ್ಪಾಗತ್ತ್ ಆದೇಶ ನೀಡಿದ್ದಾರೆ.

ಇದರಿಂದಾಗಿ ಸುರೇಶ್ ಗೋಪಿ ಅವರಿಗೆ ತಿರುಗೇಟು ಉಂಟಾಗಿದೆ.ತ್ರಿಶೂರು ನಿವಾಸಿ, ಸಿಪಿಐ ನಾಯಕ ಎ. ಎಸ್. ಬಿನೋಯ್ ಅವರು ಹೖಕೋರ್ಟಿಗೆ ಮನವಿ ಸಲ್ಲಿಸಿ ಸುರೇಶ್ ಗೋಪಿ ಸಂಸದ ಸ್ಥಾನವನ್ನು ರದ್ದು ಪಡಿಸಲು ಒತ್ತಾಯಿಸಿದ್ದರು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದ ಕಾರಣ ಸುರೇಶ್ ಗೋಪಿ ವಿಚಾರಣೆಗೆ ಹಾಜರಾಗಬೇಕಾಗಿದೆ. ಮತ ಲಾಂಛನಗಳನ್ನು ಬಳಸಿ ಸುರೇಶ್ ಗೋಪಿ ಮತ ಯಾಚಿಸಿದ್ದಾರೆಂದೂ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಕಾರಣ ಅವರ ಆಯ್ಕೆಯನ್ನು ಅಸಿಂಧುಗೊಳಿಹಸಬೇಕೆಂಬುದು ಹೖಕೋರ್ಟು ಮನವಿಯ ಬೇಡಿಕೆಯಾಗಿದೆ. ಆದರೆ ಹೖಕೋರ್ಟು ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸುರೇಶ್ ಗೋಪಿ ವಿಭಾಗೀಯ ಪೀಠವನ್ನು ಸಮೀಪಿಸುವರು ಎನ್ನಲಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!