ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ಇಂದು ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಂದರ್ಶಿಸಿದ ಅವರನ್ನು ಜಿಲ್ಲಾಧ್ಯಕ್ಷೆ ಹಾಗೂ ಕಾಸರಗೋಡು ವಿಧಾನಸಭಾ ಕ್ಷೇತ್ರ ಎನ್. ಡಿ ಎ ಅಭ್ಯರ್ಥಿ ಅಶ್ವಿನಿ ಎಂ. ಎಲ್ ಶಾಲು ಹಾಕಿ ಸ್ವಾಗತಿಸಿದರು.ಇದೇ ಮೊದಲ ಬಾರಿಗೆ ಕಾಸರಗೋಡು ಆಗಮಿಸಿದ ಅವರು ಬಿಜೆಪಿಯ ಪ್ರತಿಷ್ಠಿತ ಕ್ಷೇತ್ರಗಳಾದ ಮಂಜೇಶ್ವರ ಮತ್ತು ಕಾಸರಗೋಡಿನ ಸಾಧ್ಯತೆಗಳ ಅವಲೋಕನ ಮತ್ತು ಚಟುವಟಿಕೆಗಳ ಮಾಹಿತಿ ಪಡೆದರು.
ಕಾಸರಗೋಡಿನ ಚುನಾವಣಾ ಉಸ್ತುವಾರಿ ಹೊಂದಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪನ್ವೇಲ್ ಶಾಸಕ ಪ್ರಶಾಂತ ಠಾಕೂರ್, ಕೋಝಿಕ್ಕೋಡ್ ವಲಯ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಸುಕುಮಾರ ಕುದ್ರೆಪಾಡಿ, ಗುರುಪ್ರಸಾದ ಪ್ರಭು, ಹರೀಶ ನಾರಂಪಾಡಿ, ಪನ್ವೇಲ್ ಕೌನ್ಸಿಲರ್ ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.