ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳನ್ನು(ತಿರುವಾಭರಣ) ಹೊಂದಿರುವ ಪಂದಳ ರಾಜ ಮನೆತನದ ಮಹಾರಾಜಾ ಪುಣರ್ತಂ ನಾರಾಯಣ ವರ್ಮಾ ಅವರಿಗೆ ಹನುಮಗಿರಿಯ ಬ್ರಹ್ಮಕಲಶದ ಆಹ್ವಾನವನ್ನು ಕೇರಳದ ಪಂದಳ ಅರಮನೆಯಲ್ಲಿ ಫಲ ತಾಂಬೂಲ ನೀಡಿ ಶಾಲು ಅರ್ಪಿಸಿ ಆಮಂತ್ರಣ ಪತ್ರ ನೀಡಿ ಕ್ಷೇತ್ರದ ಬ್ರಹ್ಮಕಲಶ ಪ್ತಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ ರೆಂಜ ಹಾಗೂ ಸುಬ್ಬಪ್ಪ ಪಾಟಾಳಿ ಪಟ್ಟೆ ಹನುಮಾಗಿರಿಗೆ ಆಹ್ವಾನಿಸಿದರು.
ಮಕರವಿಳಕ್ಕು ಉತ್ಸವಕ್ಕೆ 3 ದಿನಗಳ ಮುನ್ನ, ಅಯ್ಯಪ್ಪನ ಆಭರಣಗಳನ್ನು ಇಲ್ಲಿಂದ ಮೆರವಣಿಗೆಯಲ್ಲಿ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ.ಅಂತಹ ಪವಿತ್ರ ಕ್ಷೇತ್ರದ ಮಹಾರಾಜರು ಮೊದಲ ಬಾರಿಗೆ ಹನುಮಗಿರಿಗೆ ಆಗಮಿಸಲಿದ್ದಾರೆ. ಏಪ್ರಿಲ್ 12ರ ಬ್ರಹ್ಮಕಲಶ ಸಂದರ್ಭ ಅವರು ಆಗಮಿಸಿ ಶ್ರೀ ಕ್ಷೇತ್ರದ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯರ ದರುಶನ ಪಡೆದು ಹನುಮಗಿರಿಯ ಭಕ್ತರನ್ನು ಹರಸಲಿದ್ದಾರೆ. ಪಂದಳ ಮಹಾರಾಜ ಪುಣರ್ತಂ ನಾರಾಯಣ ವರ್ಮಕೇರಳ ರಾಜ್ಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯಾಧ್ಯಕ್ಷರು. ಪಂದಳಂ ಅರಮನೆ ಆಡಳಿತ ಮಂಡಳಿಯ ಮಾಜಿ ಪ್ರಧಾನ ಕಾರ್ಯದರ್ಶಿ. ಶಬರಿಮಲೆ ದೇವಸ್ಥಾನದ ರಕ್ಷಣೆಗಾಗಿ 2018 ಅಕ್ಟೋಬರ್ 2 ರಂದು ಪಂದಳಂನಲ್ಲಿ ನಡೆಸಿದ ನಾಮ ಜಪ ಯಾತ್ರೆಯ ಮುಖ್ಯ ಸಂಘಟಕರಲ್ಲಿ ಒಬ್ಬರು. ಸನಾತನ ಮೌಲ್ಯಗಳನ್ನು ಹಿಂದೂ ಸಮಾಜದಲ್ಲಿ ಪ್ರಚಾರ ಮಾಡಲು ಮತ್ತು ಸನಾತನ ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ನೀಡಲು ಶ್ರಮಿಸುವ ಸಂಸ್ಥೆಗಳೊಂದಿಗೆ ಯಾವಾಗಲೂ ನಿಲ್ಲುತ್ತಾರೆ. ಕುಲದೇವತೆಯಾದ ಅಯ್ಯಪ್ಪ ಸ್ವಾಮಿಯ ಕುಟುಂಬದಲ್ಲಿ ಹುಟ್ಟಿ ಅಯ್ಯಪ್ಪ ಧರ್ಮದ ಸಾರವನ್ನು ಅರಿತು ತಮ್ಮ ಕರ್ಮಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.