ಮಂಗಳೂರು:
ನಗರದ 33/11 ಕೆವಿ ಉರ್ವಮಾರ್ಕೆಟ್ ಜಿಐಎಸ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಇಂದು (07.04.2026) ಬೆಳಿಗ್ಗೆ 10.00 ರಿಂದ ಸಂಜೆ 5.30ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಡೊಮಿನಿಕ್ ಚರ್ಚ್ ಮತ್ತು ಹೊಯಿಗೆಬೈಲ್ ಫೀಡರ್ ವ್ಯಾಪ್ತಿಯಲ್ಲಿ:
ಲೈನ್ ನಿರ್ವಹಣೆ, ಟ್ರೀ ಕಟಿಂಗ್ ಹಾಗೂ ತುರ್ತು ಕಾಮಗಾರಿಗಳ ಕಾರಣ ಗೋಕುಲ್ ಹಾಲ್, ಅಶೋಕನಗರ, ಆಂಟೋನಿ ಕಾಲೋನಿ, ಗೋಲ್ಡನ್ ಎಂಪಾಯರ್ ರೋಡ್, ಕುಕ್ಕಾಡಿ, ಬಾಪೂಜಿನಗರ, ಸುಂಕದಕಟ್ಟೆ, ರಘು ಬಿಲ್ಡಿಂಗ್, ಕೋಡಿಕಲ್ ಕಟ್ಟೆ, ಶಾಂತಿ ಲೇನ್, ಎಸ್.ಎನ್.ಡಿ.ಪಿ, ಕಂಚಿಗಾರ ಗುತ್ತು, ನಾಗಬ್ರಹ್ಮ ಸನ್ನಿಧಿ ರೋಡ್, ಆಲಗುಡ್ಡ, ಜೆ.ಬಿ ಲೋಬೋ ರೋಡ್, ಕೊಟ್ಟಾರ ಚೌಕಿ, ವಿವೇಕಾನಂದ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ತಿಲಕನಗರ ಫೀಡರ್ ವ್ಯಾಪ್ತಿಯಲ್ಲಿ:
ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಬೋಳೂರು, ಮಠದಕಣಿ 4ನೇ ಕ್ರಾಸ್, ತಿಲಕನಗರ, ಹಿಂದೂಸ್ಥಾನ್ ಲಿವರ್ ಹಿಂಭಾಗ, ಅಮೃತಾನಂದಮಯಿ ಶಾಲೆ, ಎಸ್.ಬಿ ರೋಡ್, ಜಾರಂದಾಯ ದೇವಸ್ಥಾನ, ಪ್ರಭು ಬೇಕರಿ, ಮಠದಕಣಿ ರಸ್ತೆ, 3ನೇ ಮತ್ತು 4ನೇ ಕ್ರಾಸ್, ಬರ್ಕೆ ಪೊಲೀಸ್ ಠಾಣೆ ಹಿಂಭಾಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಇರಲಿದೆ.
ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ವಿದ್ಯುತ್ ಇಲಾಖೆ ಮನವಿ ಮಾಡಿದೆ.