ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹನುಮಗಿರಿಯ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಎಪ್ರಿಲ್ 9 ರಿಂದ 12 ರವರೆಗೆ ‘ಹನುಮಗಿರಿ ಬ್ರಹ್ಮಕಲಶೋತ್ಸವ’ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಮಂಗಳವಾರ ಹನುಮಗಿರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು. ನನ್ನದೆಲ್ಲವನ್ನು ಅರ್ಪಿಸುತ್ತೇನೆ ಎನ್ನುವುದು ಭಕ್ತಿ. ರಾಮನಿಗೆ ಜಪದ ಅರ್ಪಣೆ, ರಾಮ ಹನುಮನಿಗೆ ನಾರಿಕೇಳ ಅರ್ಪಣೆಗೆ ಅವಕಾಶ ಮಾಡಿಕೊಡಲಿದೆ. ರಾಮಜ್ಯೋತಿ ನಂತರ ಬ್ರಹ್ಮಕಲಶ ನಡೆಯಲಿದೆ ಎಂದರು.
ಹನುಮಗಿರಿಯ ಪ್ರಭು ಶ್ರೀರಾಮ ಹಾಗೂ ಸಾಕ್ಷಾತ್ ಹನುಮನ ದಿವ್ಯ ಸಾನಿಧ್ಯ ಇರುವ ಬಯಲು ಕ್ಷೇತ್ರ ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯನಿಗೆ ದೈವಜ್ಞರ ಸಲಹೆಯಂತೆ ಏಕಕಾಲದಲ್ಲಿ ಬ್ರಹ್ಮಕಲಶ ನಡೆಯಲಿದೆ ಅಂದರು. ಇದೇ ವೇಳೆ ನಡೆಯುವ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಆಳ್ವಾಸ್ ವಿರಾಸತ್ ಕಾರ್ಯಕ್ರಮ ಕೂಡಾ ಇಲ್ಲಿ ನಡೆಯಲಿದೆ. ನಿರಂತರವಾಗಿ ಭಜನಾ ಸಂಕೀರ್ಣ ಕಾರ್ಯಕ್ರಮ ನಡೆಯಲಿದೆ ಅಂದರು. ವಿಶೇಷವಾಗಿ ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ನಡೆಯಲಿದೆ. ಇದರೊಂದಿಗೆ ರಾಮ ಜನ್ಮಭೂಮಿ ಆಯೋಧ್ಯೆ ಶ್ರೀರಾಮ ಮಂದಿರದಿಂದ ಆಗಮಿಸುವ ದಿವ್ಯ ಜ್ಯೋತಿ, ಆಂಜನಾದ್ರಿಯ ಜ್ಯೋತಿ ಜೊತೆಗೆ ರಾಮ ಹನುಮ ಜ್ಯೋತಿ ರಥಯಾತ್ರೆಯು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಪವಿತ್ರ ಕ್ಷೇತ್ರವಾದ ಹನುಮಗಿರಿಗೆ ಆಗಮಿಸಲಿದೆ ಅಂದರು. ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಬೈಟ್: ನಳೀನ್ ಕುಮಾರ್, ಮಾಜಿ ಸಂಸದ