ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಸುಬ್ರಹ್ಮಣ್ಯ ಏಪ್ರಿಲ್ 6: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಇಂದು ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದರು.


ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ತಾಯಿ ರತ್ನಾವತಿ ಹಾಗೂ ಕುಟುಂಬದವರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಳದ ಅಧಿಕಾರಿಗಳು ಸ್ವಾಗತಿಸಿ ಬರಮಾಡಿಕೊಂಡರು. ಶ್ರೀ ದೇವಳಕ್ಕೆ ಭೇಟಿ ನೀಡಿದ ಅವರು ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದು ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡರು. ಶ್ರೀ ದೇವಳದ ಮುಖ್ಯ ಅರ್ಚಕರು ತೀರ್ಥ ಪ್ರಸಾದ ನೀಡಿ ಅವರನ್ನ ಗೌರವಿಸಿದರು. ಅಲ್ಲಿಂದ ಕ್ಷೇತ್ರದ ಆರಾಧ್ಯ ದೈವ ಹೊಸಳಿ ಗಮ್ಮನ ಗುಡಿಗೆ ಭೇಟಿ ನೀಡಿ ದೈವದ ದರ್ಶನ ಪಡೆದರು. ಕಾಂತಾರ ಚಿತ್ರದ ಮೂಲಕ ಜನಮನಗಳಿಸಿದ ವೃಷಭ ಶೆಟ್ಟಿಯವರು ಇಂದು ಕುಕ್ಕೆ ಕ್ಷೇತ್ರಕ್ಕೆ ಎರಡನೇ ಬಾರಿ ಆಗಮಿಸಿದ್ದು ದೇವರ ದರ್ಶನ ಪಡೆದು ಧನ್ಯರಾದರು. ಮೊದಲನೇ ಬಾರಿ ಕ್ಷೇತ್ರಕ್ಕೆ ಆಗಮಿಸಿದಾಗ ಇಲ್ಲಿ ತುಲಾಭಾರ ಸೇವೆಯನ್ನು ಕೂಡ ಸಲ್ಲಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!