ಅತ್ತಾವರದ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ಪ್ರಾಂಗಣಕ್ಕೆ ಇಂಟರ್ಲಾಕ್ ಅಳವಡಿಸಲಾಗಿದ್ದು ಅದರ ಉದ್ಘಾಟನಾ ಸಮಾರಂಭವನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕೆ ಹಾಗೂ ದೈವಸ್ಥಾನದ ಅನೇಕ ಕಾರ್ಯ ಚಟುವಟಿಕೆಗಳಿಗೆ ಇಂಟರ್ಲಾಕ್ ನ ಅಗತ್ಯವಿರುವ ಬಗ್ಗೆ ಸ್ಥಳೀಯ ಪ್ರಮುಖರು ನನ್ನ ಗಮನಕ್ಕೆ ತಂದಿದ್ದರು. ಅದರಂತೆ ಅನುದಾನಗಳನ್ನು ಜೋಡಿಸಿಕೊಂಡು ಕಾಮಗಾರಿ ಆರಂಭಿಸಲಾಗಿ, ಇದೀಗ ದೈವ ಪ್ರೇರಣೆಯಿಂದ ಪೂರ್ಣಗೊಂಡಿದೆ ಎಂದರು.
ನಿಕಟಪೂರ್ವ ಮನಪಾ ಸದಸ್ಯರು ಹಾಗೂ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ಲಲ್ಲೇಶ್ ಕುಮಾರ್, ಮೋಹನ್ ಪೂಜಾರಿ, ಜಯಕುಮಾರ್, ಚಂದ್ರಶೇಖರ ಬಜಾಲ್, ಅನಿಲ್, ಅರಸು ಮುಂಡತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾದ ವಿದ್ಯಾಧರ್, ಪ್ರದೀಪ್, ಉಮೇಶ್ ರಾವ್, ವಿನುತಾ, ರಾಜು, ಅಕ್ಷಿತ್, ಮೊದಲಾದವರು ಉಪಸ್ಥಿತರಿದ್ದರು.