ಯುವ ಪ್ರತಿಭೆಗಳಿಗೆ ವೇದಿಕೆ: ಸ್ವರ್ಗದಲ್ಲಿ ಏಕದಿನ ರಂಗ ಕಾರ್ಯಾಗಾರ

ಭೂಮಿಕಾ ಸಂಡೇ ಥಿಯೇಟರ್ಸ್ ಸ್ವರ್ಗ ಹಾಗೂ ಸಹೋದರ ಸಂಸ್ಥೆಗಳಾದ ಎಂ.ಕೆ. ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಾತೃಭೂಮಿ ಸ್ವರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಸ್ವರ್ಗದಲ್ಲಿ ‘ರಂಗದೀಪಿಕಾ 2026’ ಏಕದಿನ ರಂಗ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಅಧ್ಯಾಪಕ, ಸಂಶೋಧಕ ಹಾಗೂ ಯಕ್ಷಗಾನ ಭಾಗವತ ಡಾ. ಸತೀಶ್ ಪುಣಿಚಿತ್ತಾರಾಯರು ಮಾತನಾಡಿ, “ನಾಟಕದ ಪರಂಪರೆ ಮತ್ತೆ ಸ್ವರ್ಗದಲ್ಲಿ ಆರಂಭವಾಗಿರುವುದು ಸಂತಸದ ಸಂಗತಿ, ಇದು ನಿರಂತರವಾಗಿ ಮುಂದುವರಿಯಲಿ” ಎಂದು ಆಶಿಸಿದರು.

ಬಾಲಕೃಷ್ಣ ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಸ್ವರ್ಗ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ನಾಟಕದ ಅನುಭವಗಳನ್ನು ಹಂಚಿಕೊಂಡರು. ಪಂಚಾಯತ್ ಸದಸ್ಯ ರಾಮಚಂದ್ರ ಎಂ ತಮ್ಮ ನಾಟಕಾಸಕ್ತಿಯ ಕುರಿತು ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಕುಮಾರಿ ಅವರು ಈ ಕಾರ್ಯಕ್ರಮವು ಮಕ್ಕಳ ಪ್ರತಿಭೆಗೆ ಉತ್ತೇಜನವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಟಕ ಕಲಾವಿದ ಬಾಬು ಪೂಜಾರಿ ಬೈರಡ್ಕ ಅವರಿಗೆ ರಂಗಗೌರವ ಸಲ್ಲಿಸಲಾಯಿತು.

ರಂಗ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ನಿರ್ದೇಶಕ ಉದಯ್ ಸಾರಂಗ್ ಹಾಗೂ ರಂಗಕರ್ಮಿ ಅಶೋಕ್ ಮಾಸ್ಟರ್ ಕೊಡ್ಲಮೊಗರು ಭಾಗವಹಿಸಿ ಕಾರ್ಯಾಗಾರವನ್ನು ಪರಿಣಾಮಕಾರಿಯಾಗಿ ನಡೆಸಿದರು.

ಕಾರ್ಯಕ್ರಮದಲ್ಲಿ ಕುಮಾರಿ ವೈಷ್ಣವಿ ಕುಮಾರಿ ಮತ್ತು ಅಭಿಜ್ಞ ಕುಮಾರಿ ದೀಪಿಕಾ ಪ್ರಾರ್ಥಿಸಿದರು. ಶ್ರೀನಿವಾಸ ನಾಯ್ಕ್ ಪೆರಿಕ್ಕಾನ ಸ್ವಾಗತಿಸಿದರು. ಉಪನ್ಯಾಸಕಿ ನವ್ಯಶ್ರೀ ಸ್ವರ್ಗ ಕಾರ್ಯಕ್ರಮವನ್ನು ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!