ಮಂಜೇಶ್ವರ : ಕುಂಜತ್ತೂರಿನ ಇಬ್ಬರು ಬಾಲಕರು ನಿನ್ನೆ ಶನಿವಾರ 5 ಗಂಟೆಯ ಬಳಿಕ ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕುಂಜತ್ತೂರು ಸ್ವಾಗತ್ ಹೋಟೆಲ್ ಪರಿಸರವಾಸಿಗಳಾದ ಇಬ್ರಾಹಿಂ ಅಶ್ರಫ್ ಎಂಬವರ ಪುತ್ರ ಯಾಸೀನ್ (13) ಹಾಗೂ ಅಮೀರ್ ಎಂಬವರ ಪುತ್ರ ಸುಲ್ತಾನ್ (14) ಎಂಬಿವರು ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.
ಈ ಚಿತ್ರದಲ್ಲಿರುವ ಬಾಲಕರು ಎಲ್ಲಿಯಾದರೂ ಪತ್ತೆಯಾದಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ಅಥವಾ ಪೋಷಕರ 8921429442 – 9746149372 ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಕೋರಲಾಗಿದೆ.