ಪರಂಬಳ ಕಯ್ಯಾರಿನಲ್ಲಿ ಭಕ್ತಿಭಾವದ ದೀಪ ಪೂಜೆ

ದುರ್ಗಾ ಶಕ್ತಿ ಕುಣಿತ ಭಜನಾ ತಂಡ, ಪರಂಬಳ ಕಯ್ಯಾರು ಇವರ ವತಿಯಿಂದ ದೀಪ ಪೂಜನ ಕಾರ್ಯಕ್ರಮವು ಶ್ರೀ ಭಾರತ್ ಮಾತಾ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಭಕ್ತಿಭಾವದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಚೆನ್ನಪ್ಪ ಏರುಗಲ್ಲು, ಶ್ರೀ ಗಿರೀಶ್ ಕುಮಾರ್ ಕಯ್ಯಾರು, ಮಹೇಶ್ ಪುಣಿಯೂರು, ಶ್ರೀಮತಿ ರಮ್ಯಾ ಯನ್ ಸೀತಾಂಗೋಳಿ ಹಾಗೂ ಶೇಸಪ್ಪ ಮುಂಡಿತಡ್ಕ ಸೇರಿದಂತೆ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಶ್ರೀ ಪುಂಡರೀಕಾಕ್ಷ ಬೆಳ್ಳೂರು (ಯೋಗಾಚಾರ್ಯರು, ಸಾಂದೀಪನಿ ಯೋಗಾಶ್ರಮ) ದೀಪ ಪೂಜನ ವಿಧಿಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ತಂಡದ ಪ್ರಧಾನ ಸಂಚಾಲಕ ಸತೀಶ್ ಕುಮಾರ್ ಕಾಪು ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಭಜನಾ ಸಮಿತಿಯ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಮಾತೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಬಳಿಕ ಸಿಹಿ ತಿಂಡಿ ವಿತರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!