ಇತಿಹಾಸ ಪ್ರಸಿದ್ಧವಾದ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಏಪ್ರಿಲ್ 19ಕ್ಕೆ ಸಿದ್ಧತೆ

ಕಾಸರಗೋಡಿನ ಇತಿಹಾಸ ಪ್ರಸಿದ್ಧವಾದ ಕಾರಣಿಕವುಳ್ಳ ಕೂಡ್ಲು ಮಾರಿಗುಡಿಯೆಂದು ಖ್ಯಾತಿ ಪಡೆದಿರುವ ಕಾಸರಗೋಡು ರಾಮದಾಸನಗರದ ಕೂಡ್ಲು ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ವಾರ್ಷಿಕ ಶುದ್ದಿ ಕಲಶ ಪ್ರತಿಷ್ಠಾ ಮಹೋತ್ಸವ ವಿವಿಧ ಧಾರ್ಮಿಕ ಸಂಕೀರ್ತನಾ ಕಾರ್ಯಕ್ರಮಗಳೊಂದಿಗೆ ಇದೇ 2026 ಏಪ್ರಿಲ್ 19 ಆದಿತ್ಯವಾರದಂದು ತಂತ್ರೀವರ್ಯರಾದ ಬ್ರಹ್ಮಶ್ರೀ ವಿಷ್ಣು ಪ್ರಕಾಶ ಪಟ್ಟೇರಿ ಕಾವುಮಠ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವುದು.
ಕಾಸರಗೋಡು ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಯ ಭಗವದ್ಭಕ್ತರು ಹಾಗೂ ಕುಟುಂಬಸ್ಥರು ಆಸ್ತಿಕ ಮಹಾಜನರು,ಊರ ಪರವೂರಿನ ಭಕ್ತಾಧಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಧಾರ್ಮಿಕ,ತಾಂತ್ರಿಕ ಸoಪ್ರದಾಯದ ಪ್ರಕಾರ ನಡೆಯುವ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ಉತ್ಸವದಲ್ಲಿ ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹೋಮ,ಗಂಟೆ 9.30 ಕ್ಕೆ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಕಲಶ ಪೂಜೆ, ವಾರ್ಷಿಕ ಶುದ್ದಿ ಕಲಶ ಪ್ರತಿಷ್ಠಾ ಮಹೋತ್ಸವ ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ ಹಾಗೂ ಶ್ರೀದೇವಿಯ ದರ್ಶನ ಸೇವೆ, ಮಧ್ಯಾಹ್ನ ಗಂಟೆ 1:30 ರಿಂದ ಅನ್ನಪ್ರಸಾದ ಸಂತರ್ಪಣೆ ರಾತ್ರಿ 7.00 ರಿಂದ ಕೂಡ್ಲು ಶ್ರೀ ಚಾಮುಂಡೇಶ್ವರಿ ಭಜನಾ ಸಂಘದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ.


ಪ್ರತಿಷ್ಠಾ ಮಹೋತ್ಸವದಂದು ಹೂವಿನಿಂದ ವಿಶೇಷ ಅಲಂಕಾರ ಪೂಜೆಯು ಸರ್ವ ಭಕ್ತಾಧಿಗಳ ಪಾಲ್ಗೊಳ್ಳುವಿಕೆಯಿಂದ ಹಮ್ಮಿಕೊಳ್ಳಲಾಗುವುದು. ಪ್ರತಿಷ್ಠಾ ಮಹೋತ್ಸವದಂದು ಮೂಡುಬಿದ್ರೆಯ ಪ್ರಕಾಶ ರಂಜಿನಿ ಪ್ರಜ್ವಿನಿ ವಂದನ್ ಬೇಕಲ್ ಅವರು ಅನ್ನದಾನ ಸೇವೆಯನ್ನು ನೀಡಲಿದ್ದಾರೆ ಎಂದು ದೇವಸ್ಥಾನದ ಭoಡಾರ ಮನೆಯ ಆಡಳಿತ ಮೋಕ್ತೇಸರ ಕೆ.ಲೀಲಾದರ ಕೂಡ್ಲು, ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಪಾತ್ರಿ ಮೋಹನ ಕೂಡ್ಲು ಕುಂಬಳೆ, ಪ್ರಧಾನ ಅರ್ಚಕ ಶ್ರೀಪತಿ ಅಡಿಗ, ಕೆ. ಉದಯಕುಮಾರ್ ಅಂಬಿಕಾರೋಡ್ ಹಾಗೂ ದೇವಸ್ಥಾನ ಸೇವಾ ಸಮಿತಿ,ಕುಟುಂಬಸ್ಥರು ಊರ ಹತ್ತು ಸಮಸ್ತರ ಪರವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ಪುನರ್ ನಿರ್ಮಾಣವನ್ನು, ಕೀರ್ತಿ ಶೇಷರಾದ ಪೋಲಿಸ್ ಸರ್ಕಲ್ ಇನ್ಸಪೆಕ್ಟರ್ ಕೆ. ವೆಂಕಟ್ರಮಣ ಕೂಡ್ಲು ಅಂಬಿಕಾ ರೋಡ್ ನಿರ್ವಹಿಸಿದ್ದರು.
ಮೊಬೈಲ್ :-9945208686

SHARE
Loading spinner

3 thoughts on “ಇತಿಹಾಸ ಪ್ರಸಿದ್ಧವಾದ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಏಪ್ರಿಲ್ 19ಕ್ಕೆ ಸಿದ್ಧತೆ

Leave a Reply

Your email address will not be published. Required fields are marked *

error: Content is protected !!