ಕಾಸರಗೋಡು : ಮಂಗಳೂರಿನ ಖ್ಯಾತ ಕನ್ನಡ ಸಂಘಟಕಿಯಾದ ರಾಣಿ ಪುಷ್ಪಲತಾ ದೇವಿ ಅಧ್ಯಕ್ಷೆಯಾದ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ರಿ.)25.4.2026.ಶನಿವಾರ ಸಂಜೆ ಗಂಟೆ 5.30 ರಿಂದ ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕ್ ನಲ್ಲಿ ನಡೆಯುವ “ಕನ್ನಡ ಜೇಂಕಾರ “ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕನ್ನಡ ಭವನ “ಉಚಿತ ವಸತಿ ಸೌಕರ್ಯ “, ಕನ್ನಡ ಭವನ ಸ್ಥಾಪಿತ “ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಮುಂತಾದ ಸಮೂಹ ಸಂಸ್ಥೆಗಳ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗಳಿಗೆ “ಗಡಿನಾಡು ಕನ್ನಡ ಪೋಷಕ “ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಪತ್ರ ಮುಖೇನ ತಿಳಿಸಿದ್ದಾರೆ.
ರಾಜಾಜಿ ಪಾರ್ಕ್ ನಲ್ಲಿ ನಡೆಯಲಿರುವ “ಕನ್ನಡ ಜೇಂಕಾರ ” ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ -ಕವಿಗೋಷ್ಠಿ, ಗೀತಗಾಯನ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ನಡೆಯಲಿರುವುದು.
ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆ ಉಳಿಸಿ ಬೆಳೆಸುವಲ್ಲಿ ಅವಿರತ ಶ್ರಮ ವಹಿಸುತ್ತಿರುವ ಕನ್ನಡ ದಂಪತಿಗಳ ಕನ್ನಡ ಸೇವೆಯನ್ನು ಪರಿಗಣಿಸಿ ಇವರೀಗೆ ಸಂಸ್ಥೆಯ ಪ್ರತಿಷ್ಠಿತ ” ಗಡಿನಾಡು ಕನ್ನಡ ಪೋಷಕ “ಪ್ರಶಸ್ತಿ ನೀಡಿ ಗೌರವಿಸುವುದಾಗಿ ರಾಣಿ ಪುಷ್ಪಲತಾ ದೇವಿ ಪತ್ರ ಮುಕೇನ ತಿಳಿಸಿದ್ದಾರೆ.