ಲಯನ್ಸ್ ಕ್ಲಬ್ ಜಿಲ್ಲೆ 317 ಡಿ ವತಿಯಿಂದ “ಸುಮಂಗಲ ಜಿಲ್ಲಾ ಕನ್ವೆನ್ಷನ್” ಸಮ್ಮೇಳನವನ್ನು ಏಪ್ರಿಲ್ 18 ಹಾಗೂ 19ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ರೈ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಮ್ಮೇಳನವನ್ನು ಜಿಲ್ಲೆಯ ಪ್ರಥಮ ಮಹಿಳೆ ಮಮತಾ ಶೆಣೈ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಗವರ್ನರ್ ಕುಡುಪಿ ಅರವಿಂದ ಶೆಣೈ ವಹಿಸಲಿದ್ದಾರೆ ಎಂದರು .
ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ನಿರ್ದೇಶಕ ಪಂಕಜ್ ಮೆಹ್ತಾ ವಂಶಿಧರ್ ಬಾಬು , ದಿಕ್ಕೂಚಿ ಭಾಷಣಗಾರರಾಗಿ ವಿದ್ವಾನ್ ಸಿ.ಎಸ್. ನಟೇಶ್ , ನಿಕಟಪೂರ್ವ ಗವರ್ನರ್ ಭಾರತೀ ಬಿ.ಎಂ., ಪ್ರಥಮ ಉಪರಾಜ್ಯಪಾಲ ತಾರಾನಾಥ್ ಎಚ್.ಎಂ., ದ್ವಿತೀಯ ಉಪರಾಜ್ಯಪಾಲ ಲಯನ್ ಗೋವರ್ಧನ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು .
ಮೊಬೈಲ್ ಕಿಚ್ಚೆನ್ ಮತ್ತು ಲಯನ್ಸ್ ವೃಕ್ಷ ಬೀಜಾಂಕುರ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸುವ ವಿಸ್ವಾಸವನ್ನು ಅವರು ವ್ಯಕ್ತಪಡಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಸುಕಲತಾ ಭಂಡಾರಿ , ಚೀಪ್ ಅಡ್ವೈಸರ್ ದೇವದಾಸ್ ಭಂಡಾರಿ , ಕೋಶಾಧಿಕಾರಿ ಉಮಾ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುಧರ್ಶನ ಪಡಿಯಾರ್ ವಿಟ್ಲ , ಕೋಶಾಧಿಕಾರಿಯಾದ ಬಾಲಕೃಷ್ಣ ಹೆಗಡೆ ಉಪಸ್ಥಿತರಿದ್ದರು .