ಹುಣಸೂರು: ಯುವಕನ ಅನುಮಾನಾಸ್ಪದ ಸಾವು, ಪ್ರಕರಣ ದಾಖಲು

ಹುಣಸೂರು: ತಾಲೂಕಿನ ಹನಗೋಡು ಗ್ರಾಮದ ಫರ್ಮಾನ್ ಪಾಷಾ (27) ಎಂಬ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಂಚವಳ್ಳಿ ಗ್ರಾಮದಲ್ಲಿ ಕಾರ್ ಗ್ಯಾರೇಜ್ ನಡೆಸುತ್ತಿದ್ದ ಫರ್ಮಾನ್ ಪಾಷಾ, ಏಪ್ರಿಲ್ 15ರಂದು ಮೈಸೂರಿನ ಬಿಳಿಕೆರೆ ಗ್ರಾಮದ ಆಫ್ರಿನ್ ಹಾಗೂ ಆಕೆಯ ಸಹೋದರ ಸಲ್ಮಾನ್ ಅವರನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ತಂದೆಗೆ ತಿಳಿಸಿ ಮನೆಯಿಂದ ಹೊರಟಿದ್ದರು.

ನಂತರ ಫರ್ಮಾನ್ ಪಾಷಾ ಅವರು ಜಾಜಿರ್ ಎಂಬ ವ್ಯಕ್ತಿಯ ಮೂಲಕ ದೂರವಾಣಿ ಕರೆ ಮಾಡಿ ತನ್ನ ಸ್ನೇಹಿತರಿಗೆ “ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ” ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಈ ಸಂಬಂಧ ಮೃತನ ತಂದೆ ಮುನೀರ್ ಪಾಷಾ ಅವರು “ನನ್ನ ಮಗನ ಸಾವಿನ ಬಗ್ಗೆ ಅನುಮಾನವಿದೆ. ಸೂಕ್ತ ತನಿಖೆ ನಡೆಸಬೇಕು” ಎಂದು ಆಗ್ರಹಿಸಿ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!