ಕಾಸರಗೋಡು: ಕನ್ನಡ ಭವನ ಪ್ರದಾನ ಕಾರ್ಯದರ್ಶಿ ವಸಂತ್ ಕೆರೆಮನೆ ಹಾಗೂ ದಿವ್ಯಶ್ರೀ ದಂಪತಿಗಳಿಗೆ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕನ್ನಡ ಭವನ ಪ್ರಕಾಶನ ವತಿಯಿಂದ “ಕನ್ನಡ ಸೇವಾ ನಿರತರು” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಂಪತಿಗಳ ವಿವಾಹ ದಶಮಾನೋತ್ಸವದ ಪ್ರಯುಕ್ತ ಕನ್ನಡ ಭವನದ ಅಭಿಮಾನಿಗಳಿಂದ ಬೇಕಲ್ ಇಂಟರ್ನ್ಯಾಷನಲ್ ಬೀಚ್ನಲ್ಲಿ ಸವಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕನ್ನಡ ಭವನದ ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಕಾಸರಗೋಡು ಅಧ್ಯಕ್ಷ ಹಾಗೂ ಕನ್ನಡ ಭವನ ಉಪಾಧ್ಯಕ್ಷರಾದ ವಿದ್ಯಾನಂದ ಹೂಡೆ, ನಾರಾಯಣ ಆಚಾರ್ಯ, ಶ್ರೀಮತಿ ಸರಸ್ವತಿ, ತೃಷನ್, ಕಾಸಿಂ ಪಾಲಕ್ಕುಂನ್ನು ಸೇರಿದಂತೆ ಹಲವರು ಭಾಗವಹಿಸಿದರು.
ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮತ್ತು ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್ ದಂಪತಿಗೆ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಪ್ರಶಸ್ತಿ ಪತ್ರ ಪ್ರದಾನಿಸಿದರು. ವಿದ್ಯಾನಂದ ಹೂಡೆ ಸ್ಮರಣಿಕೆ ನೀಡಿ ಗೌರವಿಸಿದರು.
ಕನ್ನಡ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಸಂತ್ ಕೆರೆಮನೆ–ದಿವ್ಯಶ್ರೀ ದಂಪತಿಗಳಿಗೆ ಈ ಗೌರವ ಇನ್ನಷ್ಟು ಸ್ಫೂರ್ತಿ ನೀಡಲಿ ಎಂದು ಹಾರೈಸಲಾಯಿತು.
ಸಂಧ್ಯಾರಾಣಿ ಸ್ವಾಗತಿಸಿ, ವಿದ್ಯಾನಂದ ಹೂಡೆ ವಂದಿಸಿದರು. ಕಾರ್ಯಕ್ರಮವನ್ನು ಡಾ. ವಾಮನ್ ರಾವ್ ಬೇಕಲ್ ನಿರ್ವಹಿಸಿದರು.