ಕಾಸರಗೋಡು ಜಿಲ್ಲೆಯ ಕುಂಬಳೆ ಸೀತಾಂಗೋಳಿಯಲ್ಲಿ ಜನರಿಲ್ಲದ ಕಟ್ಟಡದ ಹಿಂಭಾಗದಲ್ಲಿ ಕೋಳಿ ವಾಹನ ಚಾಲಕನನ್ನು ತಲೆಗೆ ಹೊಡೆದು ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಪ್ಪಾಳಿ ಪೊನ್ನಂ ಪಾಡಲಡುಕ್ಕಂ ನಿವಾಸಿ ಸಫಾಯತ್ (30) ಮೃತಪಟ್ಟ ವ್ಯಕ್ತಿ.
ಪ್ರಾಥಮಿಕ ಮಾಹಿತಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹತ್ಯೆ ನಡೆದಿರಬಹುದು ಆಂದಾಜಿಸಲಾಗಿದೆ. ಘಟನೆ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಯಿತು. ಸ್ಥಳೀಯರು ಮೃತದೇಹವನ್ನು ಕಂಡು ಕುಂಬಳೆಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ . ಮೃತದೇಹದ ಇನ್ಕ್ವೆಸ್ಟ್ ಪ್ರಕ್ರಿಯೆ ನಡೆಯುತ್ತಿದೆ. ಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ವೈರಾಗ್ಯ ಅಥವಾ ಇತರ ಕಲಹಗಳು ಕಾರಣವಾಗಿರಬಹುದು ಎಂಬ ಅನುಮಾನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ.