ಮಂಜೇಶ್ವರ: ಉಪ್ಪಳ ಬಳಿಯ ದಡ್ಡಂಗಡಿ ಕಂಚಿಲ ನಿವಾಸಿ, ಟೈಲರ್ ದೂಮಣ್ಣ ಶೆಟ್ಟಿಗಾರ್ ರ ಪುತ್ರ ಇಲೆಕ್ಟಿಶಿಯನ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಶರಣ್ ರಾಜ್ (35) ಇಂದು ಬೆಳಗ್ಗೆ ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಶರಣ್ ರಾಜ್ ರನ್ನು ಕುಣಿಕೆಯಿಂದ ಕೆಳಗಿಳಿಸಿ ಉಪ್ಪಳದ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಶರಣ್ ರಾಜ್ ಮೃತಪಟ್ಟಿದ್ದಾನೆ.
ಇದೀಗ ಮೃತದೇಹವನ್ನು ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ನೇಣು ಬಿಗಿಯಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಮೃತಪಟ್ಟ ಶರಣ್ ರಾಜ್ ಅವಿವಾಹಿತರಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದ ಸಕ್ರೀಯ ಕಾರ್ಯಕರ್ತನಾಗಿರುವ ಶರಣ್ ರಾಜ್ ಇತ್ತೀಚಿಗೆ ನಡೆದ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಹಗಲು ರಾತ್ರಿ ಕರ ಸೇವಕನಾಗಿ ಸೇವೆ ಸಲ್ಲಿಸಿದ್ದನು. ಅಲ್ಲದೇ ಟೀಮ್ ಗರುಡ ಸಂತಡ್ಕ ಸದಸ್ಯನಾಗಿದ್ದಾನೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.