Kasaragod: ಗಡಿನಾಡಿನ ಹೆಮ್ಮೆಯ ಕನ್ನಡ ಸಂಸ್ಥೆಯಾದ ಕನ್ನಡ ಭವನದ ಅಂಗ ಸಂಸ್ಥೆ ಕನ್ನಡ ಭವನ ಪ್ರಕಾಶನದ ಮೂರನೇ ವಾರ್ಷಿಕೋತ್ಸವ ಸಂಭ್ರಮವು ಏಪ್ರಿಲ್ 22ರಂದು ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕನ್ನಡ ಭವನ ನಿರ್ದೇಶಕರಾದ ಡಾ. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಪತ್ರಕರ್ತ ಹಾಗೂ ರಾಮರಾಜ ಕ್ಷತ್ರಿಯ ಸೇವಾಸಂಘ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ, “ಭರವಸೆಯ ಭಾರತ ರತ್ನ” ಪ್ರಶಸ್ತಿ ಪ್ರದಾನ ಹಾಗೂ ಕವಿತಾ ವಾಚನ-ಗಾಯನ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಡಾ. ಸಚಿನ್ ಬೇಕಲ್ (ಅನಂಗೂರ್) ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ದಯಾವತಿ (ಮಂಗಳೂರು) ಅವರಿಗೆ “ಭರವಸೆಯ ಭಾರತ ರತ್ನ ಪ್ರಶಸ್ತಿ 2026” ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಖ್ಯಾತ ಲೇಖಕಿ ಹಾಗೂ ಕವಯತ್ರಿ ರೇಖಾ ಸುದೇಶ್ ರಾವ್ ಅವರ ಯಾತ್ರಾ ವಿವರಣೆ ಕೃತಿ *“ಶರದಿಯಾಚೆ ಪ್ರಥಮ ಹೆಜ್ಜೆ”*ಯನ್ನು ಪ್ರದೀಪ್ ಬೇಕಲ್ ಬಿಡುಗಡೆಗೊಳಿಸಿದರು. ಬೆಂಗಳೂರಿನ ಕವಯತ್ರಿ ಲಕ್ಷ್ಮಿ ಎಸ್ ಅವರ ಕವನ ಸಂಕಲನ *“ಅಂತರ್ಧ್ವನಿ”*ಯನ್ನು ರೇಖಾ ಸುದೇಶ್ ರಾವ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರಸಭಾ ಸದಸ್ಯೆಯರಾದ ಸುಧಾ ರಾಣಿ ಅನಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ, ಕೆ. ಕಮಲಾಕ್ಷ ಅನಂಗೂರ್, ವಿದ್ಯಾನಂದ ಹೂಡೆ, ಆಶಾ ರಾಧಾಕೃಷ್ಣ, ಉಷಾ ಕಿರಣ್, ಯುವ ಸಂಘದ ಅಧ್ಯಕ್ಷ ಮುರಳಿ ಪರಕಟ್ಟಾ ಹಾಗೂ ಪಾಂಗೋಡು ನವೀನ್ ನಾಯ್ಕ್ ಭಾಗವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ಮತ್ತು ಗಾಯನ ಕಾರ್ಯಕ್ರಮಗಳು ನಡೆಯಿತು. ರೇಖಾ ರೋಷನ್, ಸಾಕ್ಷಿ, ಮೋಕ್ಷ, ರೇಖಾ ಸುದೇಶ್ ರಾವ್, ಉಷಾ ಕಿರಣ್, ದಿವ್ಯ ಕೆರೆಮನೆ, ವಸಂತ್ ಕೆರೆಮನೆ ಹಾಗೂ ಚೈತಾಲಿ ಸೇರಿದಂತೆ ಅನೇಕರು ಭಾಗವಹಿಸಿದರು.
ದಿವ್ಯ ಕೆರೆಮನೆ ಪ್ರಾರ್ಥಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ರೇಖಾ ಸುದೇಶ್ ರಾವ್ ಹಾಗೂ ಉಷಾ ಕಿರಣ್ ನಿರೂಪಿಸಿದರು. ರಾಜೇಶ್ ಕೋಟೆಕಣಿ ಧನ್ಯವಾದ ಸಲ್ಲಿಸಿದರು.