ಕಂಕನಾಡಿ ವಾರ್ಡಿನ ಸದಾಶಿವನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮ.ನ.ಪಾ ವ್ಯಾಪ್ತಿಯ 49ನೇ ಕಂಕನಾಡಿ ವಾರ್ಡಿನ ಸದಾಶಿವನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿಯು ಸುಮಾರು 10.65 ಲಕ್ಷ ರೂ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಈಗಾಗಲೇ ಮೂಡ ವತಿಯಿಂದ ಈ ಹಿಂದೆಯೇ ಪಾರ್ಕ್ ಅಭಿವೃದ್ಧಿಗೊಂಡಿದ್ದು ಪ್ರತಿನಿತ್ಯ ಅನೇಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಇನ್ನಷ್ಟು ಮುಂದುವರಿದ ಅಭಿವೃದ್ಧಿ ಕಾರ್ಯ ಅಗತ್ಯವಿರುವ ಬಗ್ಗೆ ಅನೇಕರು ಮನವಿ ಮಾಡಿದಂತೆ ಮೂಡ ಸಭೆಯಲ್ಲಿ ಅದಕ್ಕೆ ಎಲ್ಲರ ಸಹಕಾರದೊಂದಿಗೆ ಅನುಮೋದನೆ ದೊರೆತಿದ್ದು ಸಂತಸ ತಂದಿದೆ ಎಂದು ಹೇಳಿದರು.

ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್‌, ಪ್ರಾಧಿಕಾರದ ಆಯುಕ್ತರಾದ ಮೊಹಮ್ಮದ್ ನಜೀರ್, ಪ್ರಮುಖರಾದ ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ರೈ, ರಘುನಾಥ್ ಶೆಟ್ಟಿ, ಸುಕೇಶ್, ಚೇತನ್ ನೆಕ್ಕರೆಮಾರ್, ಸುಮತಿ, ಮಾನಸ ರೈ, ಮೌನೇಶ್ ಚೌಟ, ಯಶೋಧ ಗಟ್ಟಿ, ತನುಜಾ ಎಕ್ಕೂರು, ನೀರಚ್‌ಚಂದ್ರ ಪಾಲ್, ಸುಮನ್‌ದಾಸ್, ಅಬ್ದುಲ್ ಜಲೀಲ್, ಸಭಿತಾ ಮಿಸ್ಕತ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!