34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಸ್ತಗಿರಿ ಮಾಡಿದ ವಿಟ್ಲ ಠಾಣಾ ಪೊಲೀಸರು

ಬಂಟ್ವಾಳ: ಅಕ್ರಮವಾಗಿ ಕಾರಿನಲ್ಲಿ ಪೆಟ್ರೋಲ್ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾತನನ್ನು ವಿಟ್ಲ ಪೋಲೀಸರ ತಂಡ ಬಂಧಿಸಿದೆ. 1992 ರ ಇಸವಿಯ ಅ.14 ರಂದು ಕಾರೊಂದರಲ್ಲಿ ಅಕ್ರಮವಾಗಿ ಪೆಟ್ರೋಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿತರಾದ ಕಾಸರಗೋಡು ಮಂಜೇಶ್ವರ ನಿವಾಸಿ ಇಬ್ರಾಹಿಂ (28) ಹಾಗೂ ಸಿದ್ದೀಕ್ ಎಂಬವರುಗಳ ವಿರುದ್ದ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅಕ್ರ: 124/1992 ಕಲಂ:3 ಮತ್ತು ಕಲಂ: 23 ಪೆಟ್ರೋಲಿಯಂ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.


ಆರೋಪಿಗಳ ಪೈಕಿ ಸಿದ್ದೀಕ್ ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನನ್ನು ಮೇ. 11 ರಂದು ರಾತ್ರಿ, ವಿಟ್ಲ ಠಾಣಾ ಪ್ರೊಬೇಶನರ್ ಪಿಎಸ್ಐ ಸಿದ್ದಪ್ಪ , ಎಎಸ್ಐ1 ಜಯರಾಮ್ , ಪಿಸಿ 2465 ಗೋಪಾಲ್ , ಪಿಸಿ 2355 ಯಂಕಪ್ಪ , ಪಿಸಿ 2505 ಶ್ರೀಶೈಲ್ ಜೋರಾಪುರ ರವರುಗಳ ತಂಡ ಕನ್ಯಾನ ಗ್ರಾಮದ ಕಬ್ಬಿನ ಮೂಲೆ ಎಂಬಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!