ಕಾನ-ಜೋಕಟ್ಟೆ ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ

ಸುರತ್ಕಲ್ :ಕಾನ -ತೋಕೂರು -ಜೋಕಟ್ಟೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಕಾಮಗಾರಿ ನಡೆಸಿ ದುರಸ್ಥಿ ಮಾಡುವಂತೆ ಒತ್ತಾಯಿಸಿ ಇಂದು ಕಾನ ಜಂಕ್ಷನ್ ಬಳಿ ಡಿವೈಎಫ್ಐ ಕಾನ ಘಟಕ, ಆಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ನಾಗರಿಕ ಹೋರಾಟ ಸಮಿತಿ ಕಾನ ನೇತೃತ್ವದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ ಎಂ.ಎಸ್.ಇ.ಝಡ್‌ ಮತ್ತು ಎಂ.ಆರ್.ಪಿ.ಎಲ್. ಕಂಪೆನಿಗಳು ನಿರ್ವಹಿಸಬೇಕಾದ ಮುಖ್ಯ ರಸ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜನಪ್ರತಿನಿದಿನಗಳು ಕಂಪೆನಿಯವರ ಕಿವಿ ಹಿಂಡಿ ಕೆಲಸ ಮಾಡಿಸಲು ವಿಫಲರಾಗಿದ್ದಾರೆ.ಇದರ ಪರಿಣಾಮ ದಿನನಿತ್ಯ ರಸ್ತೆ ಅಪಘಾತ ಸಂಭವಿಸುತ್ತಿದೆ ಎಂದರು.

ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿದಾಗ ಪೊಲೀಸರು ರಸ್ತೆಯ ನಿರ್ವಹಣೆ ಜವಾಬ್ದಾರಿ ವಹಿಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಮುಂದಿನ 15ದಿನಗೊಳಗಾಗಿ ಕಾನ-ಜೋಕಟ್ಟೆ ರಸ್ತೆ ದುರಸ್ಥಿ ಆಗದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸೆಕ್ರೆಡ್ ಹಾರ್ಟ್ ಚರ್ಚ್ ಸುರತ್ಕಲ್ ಇದರ ಉಪಾಧ್ಯಕ್ಷರಾದ ಲಿಗೋರಿ ಜಾರ್ಜ್,ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯೋಬ್ ಬೆಂಗ್ರೆ, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಅಬ್ದುಲ್ ಬಷೀರ್, ಮಾತನಾಡಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ಅಬೂಬಕ್ಕರ್ ಬಾವ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ ಬಿ.ಕೆ ಮಸೂದ್,ಅಜ್ಮಾಲ್ ಅಹ್ಮದ್,ಶ್ರೀನಾಥ್ ಕುಲಾಲ್, ಜಗದೀಶ್, ಅಬ್ದುಲ್ ರಹೀಮ್,ಅಬೂಬಕ್ಕರ್ ಕೆ.ಪಿ, ಫ್ರಾನ್ಸಿಸ್ ಡಿಸೋಜಾ, ಮುಸ್ತಫಾ ಒಟ್ಟೆಕಾಯರ್,ಲಕ್ಸ್ಮಿಷ ಅಂಚನ್, ಹಂಝ ಮೈಂದಗುರಿ, ಸುಧೀರ್ ಕೋಡಿಕೆರೆ, ಐ ಮೊಹಮ್ಮದ್, ಇಬ್ರಾಹಿಂ ಹಳೆಮನೆ,ಹನೀಫ್ ಕುಳಾಯಿ,ನವಾಜ್ ಕುಳಾಯಿ, ಸಿರಾಜ್ ಮೈಂದಗುರಿ,ಮೊದಲಾದವರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!