ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ರಾತ್ರಿ ಮಳೆ ಸುರಿಯಿತು. ಮಂಗಳೂರು ನಗರದಲ್ಲಿ ರಾತ್ರಿ ವೇಳೆ ಕೆಲವು ಕಾಲ ಉತ್ತಮ ಮಳೆ ಸುರಿಯಿತು. ಉಳಿದಂತೆ, ಬೆಳ್ತಂಗಡಿ, ವೇಣೂರು, ಉಜಿರೆ, ಶಿರ್ಲಾಲು, ಗುರಿಪಳ್ಳ, ಸುಳ್ಯ, ನಿಂತಿಕಲ್ಲು, ಐವರ್ನಾಡು, ಬೆಳ್ಳಾರೆ, ಬಂಟ್ವಾಳ, ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ.
ಮಂಗಳೂರಿನಲ್ಲಿ 34.8 ಡಿ. ಸೆ. ಗರಿಷ್ಠ ತಾಪಮಾನ ಮತ್ತು 25.1 ಡಿ. ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ಬೆಳಗ್ಗೆ ಮೋಡದ ವಾತಾವರಣ ಇತ್ತು. ಬಳಿಕ ಉರಿ ಬಿಸಿಲು ಮತ್ತು ಸಕೆಯಿಂದ ಕೂಡಿತ್ತು. ದ.ಕ., ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.