ಬೆದ್ರಾಳದಲ್ಲಿ ಮಲತ್ಯಾಜ್ಯ ಘಟಕ ಆಗಿಯೇ ಆಗುತ್ತದೆ: ಮಹಮ್ಮದ್ ಆಲಿ ಸ್ಪಷ್ಟನೆ

ಪುತ್ತೂರು :ಪುತ್ತೂರಿನ ಬೆದ್ರಾಳದ ಬಡಾವಣೆಯ ಬಗ್ಗೆ ಪುತ್ತೂರಿನ ನಗರಸಭೆ ಮಾಜಿ ವಿಪಕ್ಷ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬೆದ್ರಾಳದಲ್ಲಿ ಮಲತ್ಯಾಜ್ಯ ಘಟಕ ಅಲ್ಲಿ ಅಗಿಯೇ ಆಗುತ್ತದೆ. ಯಾರು ಏನು ಬೇಕಾದರೂ ಮಾಡಲಿ. ಆದರೆ ಸರಕಾರ ವಿರುದ್ದ ಹೋಗಲು ಯಾರಿಗೂ ಸಾಧ್ಯವಿಲ್ಲ. ಮಲತ್ಯಾಜ್ಯ ಘಟಕಕ್ಕೆ ರಸ್ತೆ ನಿರ್ಮಾಣಕ್ಕೆ ಖಾಸಗಿ ಉದ್ಯಮಿ ಭೂ ಸ್ವಾಧೀನಕ್ಕೆ ನಗರ ಸಭೆಗೆ ಆದೇಶವಾಗಿದ್ದು ಇದರ ಪ್ರಕ್ರಿಯ ಆರಂಭವಾಗಿದೆ. ಕಾನೂನು ಬಾಹಿರ ಬಡಾವಣೆ ನಿರ್ಮಾಣಕ್ಕೆ ಮಾತ್ರ ನನ್ನ ವಿರೋಧವಿದೆ.

ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವುದು, ರಸ್ತೆ ಮುಚ್ಚುವ, ಗ್ರಾಹಕರಿಗೆ ಮೋಸ ಮಾಡುವವರಿಗೆ ಮುಂದಿನ ದಿನಗಳಲ್ಲಿ ಮಾರಿ ಹಬ್ಬವಿದೆ ಎಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ, ಮಾಜಿ ಕಾರ್ಯದರ್ಶಿಗಳಾದ ರೋಷನ್ ಡಯಾಸ್, ಕಮರುದ್ದೀನ್ ಕೂರ್ನಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!