ಕಾಸರಗೋಡು : ಅಕ್ಷರ ಲೋಕದ ಸಾಧಕರಿಗೆ ಅಭಿನಂದನೆಯ ಮಹಾಪೂರ: ಕುಡಾಲ್ ಮೇರ್ಕಳದಲ್ಲಿ ಸಂಸ್ಕೃತಿ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ

​ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಆಶ್ರಯದಲ್ಲಿ, ಕುಡಾಲ್ ಮೇರ್ಕಳದ ಸುಬ್ಬಯ್ಯ ಕಟ್ಟೆ ಅನುದಾನಿತ ಕಿ.ಪ್ರಾ. ಶಾಲೆಯಲ್ಲಿ ‘ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ’ವು ಅತ್ಯಂತ ಸಡಗರದಿಂದ ಜರುಗಿತು.


​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, “ಕಾಸರಗೋಡು ಸೇರಿದಂತೆ ಕರ್ನಾಟಕದ ಆರು ಗಡಿನಾಡು ಭಾಗಗಳಲ್ಲಿರುವ ಕನ್ನಡ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಗಡಿನಾಡ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ,” ಎಂದು ಭರವಸೆ ನೀಡಿದರು.


​ಪತ್ರಿಕೋದ್ಯಮ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಸಂದರ್ಭದಲ್ಲಿ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸತೀಶ್ ಇರಾ (ಉದಯವಾಣಿ ಛಾಯಾಗ್ರಾಹಕ), ಬಿ.ಎಂ.ಹನೀಫ್, ಹರೀಶ್ ಮಾಂಬಾಡಿ, ಸುಭಾಷ್ ಸಿರಿಯಾ, ಎಚ್.ಇ. ರವಿ (ಸೋಮವಾರಪೇಟೆ), ವಿಶ್ವನಾಥ್ ಬೆಳಗಲ್ವಕೊಪ್ಪಳ, ಪ್ರಕಾಶ್ ಸುವರ್ಣ ಕಟಪಾಡಿ, ದೇವೇಂದ್ರಪ್ಪ ಆವಂಟಿ (ಗುಲ್ಬರ್ಗ), ನವೀನ್ ಡಿಸೋಜ (ಕೊಡಗು), ಎ.ಆರ್. ಚಿದಂಬರ (ತುಮಕೂರು), ಕೆ.ಆರ್. ಮಂಜುನಾಥ (ಹಾಸನ).
​ ಕುರಿಯ ವಾಸುದೇವ ಎಂ. ಹೊಳ್ಳ, ಡಾ. ಯು.ಎಂ. ರವಿ, ಪುಂಡಲೀಕ ಭೀಮಪ್ಪ ಬಾಲೋಜಿ, ಸಂಶುದ್ದೀನ್ ಎಣ್ಮೂರು, ತೆಕ್ಕೆಕೆರೆ ಶಂಕರನಾರಾಯಣ ಭಟ್ಟ, ಮತ್ತು ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡ್ ಎಂಬಿವರಿಗೆ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಸಂದೀಪ್ ಪುರಂದರ್ ಶೆಟ್ಟಿ (ಕ್ರೀಡೆ/ಕಲೆ), ಬಿ.ಎ. ಖಾದರ್ ಹಾಜಿ ಬಗುಡೆಲ್ (ಸಮಾಜ ಸೇವೆ), ಡಾ. ಶಶಿಧರ ಎಚ್. ದೊಡ್ಡಮನಿ (ಸಂಶೋಧನೆ), ಹಾಗೂ ಬಾಲ ಪ್ರತಿಭೆಗಳಾದ ಝಹೀಂ ಕುಬಣೂರು (ಬಾಹ್ಯಾಕಾಶ ಕ್ಷೇತ್ರ) ಮತ್ತು ಮೊಹಮ್ಮದ್ ಝಯಾನ್ ಇಸ್ಮಾಯಿಲ್ ಪಿ. ಅವರನ್ನು ಸನ್ಮಾನಿಸಲಾಯಿತು.


​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಸೋಮಶೇಖರ ಜೆ.ಎಸ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಯ್ಯದ್ ಯು.ಕೆ. ಸೈಫುಲ್ಲಾ ತಂಙಳ್, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ (ಕಸಾಪ ಕೇರಳ ಘಟಕ), ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಪುಷ್ಪರಾಜ್ ಬಿ.ಎನ್. (ಕೆಯುಡಬ್ಲ್ಯೂಜೆ ದಕ ಅಧ್ಯಕ್ಷ), ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

​ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಯುಡಬ್ಲ್ಯೂಜೆ ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯ ಕಟ್ಟೆ ಹಾಗೂ ಬಿ.ಎ. ಖಾದರ್ ಬಗುಡೆಲ್ ಉಪಸ್ಥಿತರಿದ್ದರು. ಅಶೋಕ ಭಂಡಾರಿ ಸ್ವಾಗತಿಸಿ, ಸೌಮ್ಯ ಗೌಡ ಬೆಂಗಳೂರು ಕಾರ್ಯಕ್ರಮ ನಿರ್ವಹಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!