ಚಿಲಿಂಬಿಗುಡ್ಡೆಯಲ್ಲಿ ಸಂತರ ಪಾದಯಾತ್ರೆ ಕಾರ್ಯಕ್ರಮ

ಮಂಗಳೂರು :ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲೆಯ ಧರ್ಮ ಪ್ರಸಾರ ಹಾಗೂ ಸಾಮಾಜಿಕ ಸಮರಸತಾ ವಿಭಾಗ ದ ವತಿಯಿಂದ ಚಿಲಿಂಬಿ ಗುಡ್ಡೆಯ ಉಪೇಕ್ಷಿತ ಬಂದುಗಳ ವಸತಿಯಲ್ಲಿ ಚಿತ್ರಾಪುರ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಗಳಿಂದ ಸಂತರ ಪಾದ ಯಾತ್ರೆ ಕಾರ್ಯಕ್ರಮ ರವಿವಾರ ನಡೆಯಿತು.

ಶ್ರೀಪಾದರು ಹತ್ತಕ್ಕೂ ಹೆಚ್ಚು ಉಪೇಕ್ಷಿತ ಬಂಧುಗಳ ಮನೆಗೆ ತೆರಳಿ ಧರ್ಮ ಪಾಲನೆ ಮತ್ತು ರಕ್ಷಣೆಯ ಮಹತ್ವವನ್ನು ತಿಳಿಸಿದರು. ಚಿಲಿಂಬಿ ಗುಡ್ಡೆ ಶ್ರೀ ರಾಮಾಂಜನೆಯ ಭಜನಾ ಮಂದಿರದಲ್ಲಿ ಶ್ರೀಪಾದರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ಶ್ರೀ ರಾಮಾಂಜನೆಯ ಯುವಕ ಮಂಡಲದ ಪದಾಧಿಕಾರಿಗಳು ಪೂರ್ಣ ಸಹಕಾರವನ್ನಿತ್ತರು.

ಈ ಸಂದರ್ಭದಲ್ಲಿ ವಿ. ಹಿಂ.ಪ ಜಿಲ್ಲಾಧ್ಯಕ್ಷರಾದ ಶ್ರೀ H K ಪುರುಷೋತ್ತಮ್, ವಿ. ಹಿಂ. ಪ ಜಿಲ್ಲಾ ಪ್ರಮುಖರಾದ ಗುರುಪ್ರಸಾದ್ ಕಡಂಬಾರ್, ಜಯರಾಮ್ ಆಚಾರ್ಯ, ರವಿ ಕಾಪಿಕ್ಕಾಡ್, ರಾಜು ಕುಲಾಲ್, ವಸಂತ ಶೇಟ್, ಸತೀಶ್ ಶೆಟ್ಟಿ ನೆಕ್ಕಿಲ, ಪ್ರಸಾದ್ ಕೊಂಚಾಡಿ, ಹರೀಶ್ ಶೇಟ್ ಮತ್ತು ಮಣ್ಣಾಗುಡ್ಡೆ ಪ್ರಖಂಡ ಪ್ರಮುಖರಾದ ಶ್ರೀ ಲೊಕೇಶ್ ಶೆಟ್ಟಿ, ಪ್ರಶಾಂತ್ ನಾಯ್ಕ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!