ಅಂತರರಾಜ್ಯ ಮಾದಕ ದ್ರವ್ಯ ಜಾಲದ ಪ್ರಮುಖ ಆರೋಪಿ ಕುಂಬಳೆ ಪೊಲೀಸರ ವಶಕ್ಕೆ

​ಮಂಜೇಶ್ವರ: ಕೇರಳಕ್ಕೆ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಅಂತರರಾಜ್ಯ ಜಾಲದ ಪ್ರಮುಖ ಕೊಂಡಿ, ಕೋಝಿಕೋಡ್ ತಿರುವಂಬಾಡಿ ನಿವಾಸಿ ಗೊಡ್ವಿನ್ (30) ಎಂಬಾತನನ್ನು ಕುಂಬಳೆ ಪೊಲೀಸರು ಕರ್ನಾಟಕದ ಮಡಿಕೇರಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

​ಕಳೆದ ಫೆಬ್ರವರಿಯಲ್ಲಿ ಮಂಗಲ್ಪಾಡಿ ಎಂಬಲ್ಲಿ 53.980 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಈತ ಎರಡನೇ ಆರೋಪಿಯಾಗಿದ್ದಾನೆ. ಮೈಸೂರಿನಲ್ಲಿದ್ದ ಈತನ ಅಡಗುತಾಣವನ್ನು ಪೊಲೀಸರು ಸುತ್ತುವರೆದಾಗ, ಅಪಾರ್ಟ್‌ಮೆಂಟ್ ಗೇಟ್‌ಗೆ ಕಾರು ಡಿಕ್ಕಿ ಹೊಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು.

ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಗಂಟೆಗಳ ಕಾಲ ಬೆನ್ನಟ್ಟಿ ಮಡಿಕೇರಿ ಬಳಿ ಈತನನ್ನು ಸೆರೆಹಿಡಿದರು.
​ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಕುಂಬಳೆ ಎಸ್.ಹೆಚ್.ಓ ಬೈಜು ಕೆ. ಜೋಸ್, ಎಸ್.ಐ ಅನಂತಕೃಷ್ಣನ್ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ. ಮೈಸೂರು ಪೊಲೀಸರ ನೆರವಿನೊಂದಿಗೆ ನಡೆಸಿದ ವೈಜ್ಞಾನಿಕ ತನಿಖೆಯು ಆರೋಪಿಯ ಬಂಧನಕ್ಕೆ ಸಹಕಾರಿಯಾಯಿತು. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!