ಆಶ್ರಮದಲ್ಲಿ ಮಹಿಳೆಯ ಆತ್ಮಹತ್ಯೆ: ಬಂಟ್ವಾಳದಲ್ಲಿ ದಾರುಣ ಘಟನೆ

ಬಂಟ್ವಾಳ: ಆಶ್ರಮದಲ್ಲಿ ವಾಸ್ತವ್ಯ ಇದ್ದ ಮಹಿಳೆಯೊರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಅರಳ ಗ್ರಾಮದ ಗುಡ್ಡೆಯಂಗಡಿ ಸ್ನೇಹ ಭಾರತಿ ವಿದ್ಯಾಸಂಸ್ಥೆಯ ಅಧೀನದಲ್ಲಿರುವ ” ನಮ್ಮ ಹಿರಿಯರ ಮನೆ” ಅನಾಥಶ್ರಮದಲ್ಲಿ ವಾಸ್ತವ್ಯ ಇದ್ದ ಉಡುಪಿ ಜಿಲ್ಲೆಯ ಪಡು ಗ್ರಾಮದ ಉಮ್ಮರ್ ಎಂಬವರ ಪತ್ನಿ ಲಕ್ಮೀ ( 67) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.


ಮಾನಸಿಕವಾಗಿ ನೊಂದುಕೊಂಡು ವಾಸ್ತವ್ಯದಲ್ಲಿ ಇದ್ದ ಮಹಿಳೆ ಆಶ್ರಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅನಾಥಶ್ರಮದ ಮೇಲ್ವಿಚಾರಕರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಳಾಸವಿದ್ದರು ಮೃತರ ವಾರಸುದಾರರು ಪತ್ತೆಯಾಗದೆ ಇರುವ ಕಾರಣಕ್ಕಾಗಿ ಮೃತದೇಹವನ್ನು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಶೀತಗಾರದಲ್ಲಿ ಇಡಲಾಗಿದ್ದು, ಮೃತರ ವಾರಸುದಾರರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಉಪನಿರೀಕ್ಷರರನ್ನು ಸಂಪರ್ಕ ಮಾಡುವಂತೆ ಪ್ರತಿಕಾ ಪ್ರಕಟನೆ ಮೂಲಕ ಕೋರಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!