ಪುತ್ತೂರು ತಾಲ್ಲೂಕು ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಕಲ ಚೇತನರ ಸೇವಾ ಕೇಂದ್ರ ಕಚೇರಿಯ ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯ ಕರ್ತರಾದ ನವೀನ್ ಕುಮಾರ್ ರವರ ಮನವಿಗೆ ಸ್ಪಂದಿಸಿದ ಪುತ್ತೂರು ಸರಕಾರಿ ನೌಕರರ ಸಭಾಂಗಣ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ದ್ವಾರಕ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ದಿನಾಂಕ :18/5/26ರ ಸೋಮವಾರ ದಂದು ಪುತ್ತೂರು ತಾಲ್ಲೂಕು ಕೇಮ್ಮಿಂಜೆ ಗ್ರಾಮದ ಮರೀಲ್ ಮನೆ ನಿವಾಸಿಯಾದ ತೀರ್ವತರದ ಎರಡು ಕಾಲು ಕಳೆದು ಕೊಂಡ ದೈಹಿಕವಾಗಿ 80% ವಿಕಲ ಚೇತನರಾದ ನಾಗರಾಜ್ ಇವರಿಗೆ ಸ್ವಂತ ಉದ್ಯೋಗ ಮಾಡಿ ಜೀವನ ನಿರ್ವಹಣೆ ಮಾಡಲು ಹೊಲಿಗೆ ಯಂತ್ರ ವನ್ನು ಅವರ ಮನೆ ಕೇಮ್ಮಿಂಜೆ ಗ್ರಾಮದ ಮರೀಲ್ ಹೋಗಿ ವಿತರಣೆ ಮಾಡಲಾಯಿತು.
ಸಂದರ್ಭದಲ್ಲಿ ವಿಕಲ ಚೇತನರಾದ ನಾಗರಾಜ್ ರವರ ಪತ್ನಿ ಶ್ರೀಮತಿ ಸುಮಂಗಲ ಪುತ್ತೂರು ,ದ್ವಾರಕ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾದ ಶ್ರೀ ಗೋಪಾಲ ಕೃಷ್ಣ ಭಟ್, ಎ, ಪುತ್ತೂರು ದ್ವಾರಕ ಕಾರ್ಪೋರೇಶನ್ ಆಪರೇಷನ್ ಹೆಡ್ ಶ್ರೀ ದುರ್ಗಾ ಗಣೇಶ್, ದ್ವಾರಕ ಕಾರ್ಪೋರೇಶನ್ ಇನ್ವೆಟರಿ ಮ್ಯಾನೆಜರ್ ಶ್ರೀ ಮೋಹನ್ ಮೂರ್ತಿ ಎಂ. ಎನ್ ಉಪಸ್ಥಿತರಿದ್ದರು.