ಮಂಗಳೂರು
ಮಾತಾ ಅಮೃತಾನಂದಮಯಿ ದೇವಿ ಅವರು ಮೇ 28 ಮತ್ತು 29ರಂದು ಮಂಗಳೂರಿನಲ್ಲಿ ನಡೆಯಲಿರುವ ‘ಅಮೃತಸಂಗಮ 2026’ ಹಾಗೂ ಬ್ರಹ್ಮಸ್ಥಾನಂ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಏಳು ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸುತ್ತಿರುವ ಅಮ್ಮನವರ ಸ್ವಾಗತಕ್ಕೆ ಭಕ್ತರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಈ ಬಾರಿ ಕೇರಳದ ಹೊರಗೆ ಕರ್ನಾಟಕದಲ್ಲಿ ಆಯ್ಕೆಯಾದ ಏಕೈಕ ಸ್ಥಳ ಮಂಗಳೂರು ಎನ್ನುವುದು ವಿಶೇಷವಾಗಿದ್ದು, ಅಮ್ಮನವರಿಗೆ ಮಂಗಳೂರಿನ ಭಕ್ತರ ಮೇಲೆ ಇರುವ ಅಪಾರ ಮಮತೆಯ ಪ್ರತಿಫಲವೆಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಹಲವು ಸಮಾಜಮುಖಿ ಹಾಗೂ ಮಾನವೀಯ ಸೇವಾ ಯೋಜನೆಗಳಿಗೆ ಚಾಲನೆ ನೀಡುವ ಸಾಧ್ಯತೆಯೂ ಇದೆ.
ಜಾತಿ, ಮತ, ಧರ್ಮ, ವರ್ಣಭೇದವಿಲ್ಲದೆ ವಿಶ್ವದಾದ್ಯಂತ ಜನರಿಗೆ ಪ್ರೀತಿ, ಶಾಂತಿ ಹಾಗೂ ಮಾನವೀಯತೆಯ ಸಂದೇಶ ಸಾರುತ್ತಿರುವ ಅಮ್ಮನವರು ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಅನೇಕ ಸಾಮಾಜಿಕ ಸೇವಾ ಯೋಜನೆಗಳ ಮೂಲಕ ಜನಮಾನಸದಲ್ಲಿ ಆರಾಧ್ಯ ಸ್ಥಾನ ಪಡೆದಿದ್ದಾರೆ. ಈ ಹಿನ್ನೆಲೆ ಅಮ್ಮನವರ ಕಾರ್ಯಕ್ರಮಕ್ಕೆ ರಾಜ್ಯ ಸೇರಿದಂತೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಬೋಳೂರಿನ ಅಮೃತ ವಿದ್ಯಾಲಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮ
ಎರಡು ದಿನಗಳ ಕಾಲ ಮಂಗಳೂರಿನ ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 28ರ ಕಾರ್ಯಕ್ರಮಗಳು
ಅಮೃತಸಂಗಮ – ಯಜ್ಞಶಾಲೆಯಲ್ಲಿ
ಬೆಳಗ್ಗೆ 5.45 – ಲಲಿತಾ ಸಹಸ್ರನಾಮ ಅರ್ಚನೆ
ಬೆಳಗ್ಗೆ 7.30 – ರಾಹು ದೋಷ ನಿವಾರಣಾ ಪೂಜೆ
ಬೆಳಗ್ಗೆ 10.30 – ಅಮ್ಮನ ಸತ್ಸಂಗ, ಭಜನೆ ಹಾಗೂ ಧ್ಯಾನ
ಬಳಿಕ ವೈಯಕ್ತಿಕ ದರ್ಶನ ಹಾಗೂ ಅಮೃತಾಲಿಂಗನ
ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ
ಬೆಳಗ್ಗೆ 5.30 – ಮಹಾ ಗಣಪತಿ ಹೋಮ ಹಾಗೂ ನವಗ್ರಹ ಶಾಂತಿ ಹೋಮ
ಬೆಳಗ್ಗೆ 9.30 – ಮಹಾ ಮೃತ್ಯುಂಜಯ ಹೋಮ
ಸಂಜೆ 5.00 – ಮಹಾ ಸುದರ್ಶನ ಹೋಮ
ಸಂಜೆ 6.00 – ಅಲಂಕಾರ ಪೂಜೆ
ಸಂಜೆ 7.00 – ದೇವಿ ಪೂಜೆ (ಭಗವತಿ ಸೇವೆ)
ಉದಯಾಸ್ತಮಾನ ಪೂಜೆ ಪ್ರಸಾದ ಸಂಜೆ ಆರತಿಯ ಬಳಿಕ ವಿತರಿಸಲಾಗುತ್ತದೆ.
ಮೇ 29ರ ಕಾರ್ಯಕ್ರಮಗಳು
ಅಮೃತಸಂಗಮ – ಯಜ್ಞಶಾಲೆಯಲ್ಲಿ
ಬೆಳಗ್ಗೆ 5.45 – ಲಲಿತಾ ಸಹಸ್ರನಾಮ ಅರ್ಚನೆ
ಬೆಳಗ್ಗೆ 7.30 – ಶನಿ ದೋಷ ನಿವಾರಣ ಪೂಜೆ
ಬೆಳಗ್ಗೆ 10.30 – ಅಮ್ಮನ ಸತ್ಸಂಗ, ಭಜನೆ ಹಾಗೂ ಧ್ಯಾನ
ಬಳಿಕ ವೈಯಕ್ತಿಕ ದರ್ಶನ ಹಾಗೂ ಅಮೃತಾಲಿಂಗನ
ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ
ಬೆಳಗ್ಗೆ 5.30 – ಮಹಾ ಗಣಪತಿ ಹೋಮ ಹಾಗೂ ನವಗ್ರಹ ಶಾಂತಿ ಹೋಮ
ಬೆಳಗ್ಗೆ 9.30 – ಮಹಾ ಧನ್ವಂತರಿ ಹೋಮ
ಸಂಜೆ 5.00 – ಮಹಾ ಸುದರ್ಶನ ಹೋಮ
ಸಂಜೆ 6.00 – ಅಲಂಕಾರ ಪೂಜೆ
ಸಂಜೆ 7.00 – ದುರ್ಗಾ ಪೂಜೆ
ವಿಶೇಷ ಲೇಖನ ಯಜ್ಞ
ವಿಶೇಷ ಲೇಖನ ಯಜ್ಞ
“ಓಂ ಶಿವ ಶಕ್ತ್ಯೈಕ್ಯ ರೂಪಿಣ್ಯೈ ನಮಃ” ಮಂತ್ರದೊಂದಿಗೆ ಲೋಕ ಕಲ್ಯಾಣಕ್ಕಾಗಿ ವಿಶೇಷ ಲೇಖನ ಯಜ್ಞ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು .
ಮೇ 28ರಂದು ಸೇವಾ ಯೋಜನೆಗಳ ಅನಾವರಣ
ಮೇ 28ರಂದು ಬೆಳಗ್ಗೆ 10.30ಕ್ಕೆ ಅಮ್ಮನವರ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಸಮಾಜಮುಖಿ ಹಾಗೂ ಮಾನವೀಯ ಸೇವಾ ಯೋಜನೆಗಳ ಅನಾವರಣ ನಡೆಯಲಿದೆ ಎಂದರು .
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಯು.ಟಿ. ಖಾದರ್ ಫರೀದ್, ದಿನೇಶ್ ಗುಂಡೂರಾವ್, ಕ್ಯಾಪ್ಟನ್ ಬೃಜೇಶ್ ಚೌಟ, ಡಿ. ವೇದವ್ಯಾಸ ಕಾಮತ್, ಪ್ರಮೋದ್ ಮಧ್ವರಾಜ್ ಹಾಗೂ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು .
ಅಮ್ಮನ ದರ್ಶನಕ್ಕೆ ಉಚಿತ ವ್ಯವಸ್ಥೆ
ಅಮ್ಮನವರ ದರ್ಶನಕ್ಕೆ ಯಾವುದೇ ಶುಲ್ಕವಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಟೋಕನ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 9.30ರೊಳಗೆ ಆಗಮಿಸುವವರಿಗೆ ಟೈಮ್ ಕಾರ್ಡ್ ವಿತರಿಸಲಾಗುತ್ತದೆ. ಅದರ ಆಧಾರದ ಮೇಲೆ ದರ್ಶನ ಟೋಕನ್ ನೀಡಲಾಗುತ್ತದೆ ಎಂದರು .
ಸತ್ಸಂಗ, ಭಜನೆ ಹಾಗೂ ಧ್ಯಾನದ ಬಳಿಕ ಟೋಕನ್ ಕ್ರಮದಂತೆ ಅಮ್ಮನವರು ಭಕ್ತರಿಗೆ ‘ಅಮೃತಾಲಿಂಗನ’ದ ಅನುಗ್ರಹ ದರ್ಶನ ನೀಡಲಿದ್ದಾರೆ. ಪುಟ್ಟ ಮಕ್ಕಳಿಗೂ ಪ್ರತ್ಯೇಕ ಟೋಕನ್ ಕಡ್ಡಾಯವಾಗಿರುತ್ತದೆ ಎಂದರು .
ಭಕ್ತರಿಗೆ ವಸತಿ ಹಾಗೂ ಅನ್ನಸಂತರ್ಪಣೆ
ದೇಶ-ವಿದೇಶಗಳಿಂದ ಆಗಮಿಸುವ ಭಕ್ತರಿಗಾಗಿ ಪೂರ್ವ ನೋಂದಣಿ ಆಧಾರದ ಮೇಲೆ ವಸತಿ ವ್ಯವಸ್ಥೆ ಮಾಡಲಾಗಿದೆ. ಮೇ 28 ಮತ್ತು 29ರಂದು ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಕುಡಿಯುವ ನೀರು, ಮಜ್ಜಿಗೆ ಹಾಗೂ ಬಿಸ್ಕೆಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ಕಾರ್ಯಕ್ರಮದ ಬಳಿಕ ವಿವಿಧ ಪ್ರದೇಶಗಳಿಗೆ ತೆರಳಲು ಬಸ್ ವ್ಯವಸ್ಥೆಯೂ ಲಭ್ಯವಿರಲಿದೆ ಎಂದು ತಿಳಿಸಿದರು .
ಭಕ್ತರಿಗೆ ವಸತಿ ಹಾಗೂ ಅನ್ನಸಂತರ್ಪಣೆ
ದೇಶ-ವಿದೇಶಗಳಿಂದ ಆಗಮಿಸುವ ಭಕ್ತರಿಗಾಗಿ ಪೂರ್ವ ನೋಂದಣಿ ಆಧಾರದ ಮೇಲೆ ವಸತಿ ವ್ಯವಸ್ಥೆ ಮಾಡಲಾಗಿದೆ. ಮೇ 28 ಮತ್ತು 29ರಂದು ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಕುಡಿಯುವ ನೀರು, ಮಜ್ಜಿಗೆ ಹಾಗೂ ಬಿಸ್ಕೆಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕಾರ್ಯಕ್ರಮದ ಬಳಿಕ ವಿವಿಧ ಪ್ರದೇಶಗಳಿಗೆ ತೆರಳಲು ಬಸ್ ವ್ಯವಸ್ಥೆಯೂ ಲಭ್ಯವಿರಲಿದೆ ಎಂದು ಆಯೋಜಕರು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್, ಗೌರವಾಧ್ಯಕ್ಷರಾದ ಡಾ. ಜೀವರಾಜ್ ಸೊರಕೆ, ಸಿ.ಎ. ವಾಮನ್ ಕಾಮತ್, ಡಾ. ವಸಂತಕುಮಾರ ಪೆರ್ಲ, ಅಮೃತಸಂಗಮ ಆಯೋಜನಾ ಸಮಿತಿಯ ಕಾರ್ಯದರ್ಶಿ ಸಿ.ಎ. ರಾಮನಾಥ್ ಹಾಗೂ ಡಾ. ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.