ಬದ್ರಿಯಾ ಜುಮಾ ಮಸೀದಿ ಮತ್ತು ಹಯತುಲ್ ಇಸ್ಲಾಂ ಮದರಸ ಬಜಾಲ್ ನಂತೂರ್ ಈದುಲ್ ಅಳ್ಹಾ (ಬಕ್ರೀದ್)ಆಚರಣೆ

ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಆಚರಣೆ ನಡೆಯಿತು.
ಖತೀಬರಾದ ಅಬ್ದುಲ್ ನಾಸಿರ್ ಸಅದಿ ಈದ್ ಆಶಂಸ ಭಾಷಣ ಮಾಡಿದರು .ತನ್ನ ಭಾಷಣದಲ್ಲಿ ಯಾರೂ ಯಾರೊಂದಿಗೂ ದ್ವೇಷಿಸದೆ ಪರಸ್ಪರ ಕಚ್ಛಾಟದೆ ಒಗ್ಗಟ್ಟಿನಿಂದ ಬಾಳಿರಿ ಯಾವುದೇ ಪ್ರತಿಸಂದಿ ನೇರಿಟ್ಟರೂ ಅಲ್ಲಾಹನು ನೀಡಿದ ಅನುಗ್ರಹಗಳನ್ನು ಮರೆಯದೆ ಅದಕ್ಕೆ ಕೃತಜ್ಞತೆ ಸಲ್ಲಿಸಿ, ಸದಾ ಸಮಯ ಅಲ್ಲಾಹನಿಗೆ ತಲೆಬಾಗಿ ಇಹಪರ ವಿಜಯಿಗಳಾಗಲು ಪ್ರಯತ್ನಿಸಿರಿ ಎಂಬ ಹಿತವಚನ ನೀಡಿದರು‌

ನಂತರ ಸದರ್ ಮುಅಲ್ಲಿಮರಾದ ಅಬ್ದುಲ್ ಹಕೀಂ ಮದನಿ ಈದ್ ನಮಾಜು ಹಾಗೂ ಖುತುಬಾ ನಿರ್ವಹಿಸಿದರು. ಕೊನೆಗೆ ಕೂಟು ಪ್ರಾರ್ಥನೆ ನಡೆಸಿ ಪರಸ್ಪರ ಹಸ್ತಲಾಂಘಣ ದೊಂದಿಗೆ ಕೊನೆಗೊಳಿಸಲಾಯಿತು.

ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್, ಉಪಾಧ್ಯಕ್ಷರುಗಳಾದ ಅಶ್ರಫ್ ಕೆ ಇ, ಎಚ್ ಎಸ್ ಹನೀಫ್, ಬಿ ಏನ್ ಅಬ್ಬಾಸ್, ಕಾರ್ಯದರ್ಶಿ ಅಬ್ದುಲ್ ಹಮೀದ್, ನಝೀರ್ ಬಜಾಲ್, ಯೂಸುಫ್, ಹನೀಫ್ ಕೆಳಗಿನ ಮನೆ, ನಝೀರ್ ಪಾಂಡೆಲ್, ಯು ಪಿ ವಾಸಿಂ, ಬದ್ರುಲ್ ಮುನೀರ್ ಎಚ್ ಎಸ್, ರಹಿಮಾನ್ ಮದನಿ ಜಮಾತ್ ಸದಸ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!