ಮಂಜೇಶ್ವರ : ಧರ್ಮತ್ತಡ್ಕದ ಎಂ.ಐ.ಎ.ಎಲ್.ಪಿ ಶಾಲೆಯಲ್ಲಿ ಅಮಾನತುಗೊಂಡಿದ್ದ ಶಿಕ್ಷಕ ಕೆ.ವಿ. ಜಯಪ್ರಸಾದ್ ಮರಳಿ ಶಾಲೆಗೆ ಹಾಜರಾಗಿರುವುದು ಮತ್ತೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಡಿಇಒ ಆದೇಶದ ಮೇರೆಗೆ ಬದಿಯಡ್ಕ ಪೊಲೀಸರ ಸಮ್ಮುಖದಲ್ಲಿ ಶಿಕ್ಷಕರು ಹಾಜರಾತಿ ದಾಖಲಿಸಿದ್ದು, ಇದನ್ನು ವಿರೋಧಿಸಿ ಪೋಷಕರು ತೀವ್ರ ಪ್ರತಿಭಟನೆ ನಡೆಸಿದರು.ಮಕ್ಕಳನ್ನು ತರಗತಿಯಲ್ಲಿ ಕೂಡಿ ಹಾಕುವುದು ಮತ್ತು ಶೌಚಾಲಯಕ್ಕೆ ಹೋಗಲು ಅವಕಾಶ ನೀಡದಿರುವುದು ಸೇರಿದಂತೆ ಈ ಶಿಕ್ಷಕನ ವಿರುದ್ಧ ಗಂಭೀರ ಆರೋಪಗಳಿವೆ.
ಸದ್ಯ ತಮ್ಮ ಬೇಡಿಕೆಗೆ ಮನ್ನಣೆ ಸಿಗದಿದ್ದರೆ ಮಕ್ಕಳನ್ನು ಶಾಲೆ ಬದಲಾಯಿಸುವುದಾಗಿ ಪೋಷಕರು ಎಚ್ಚರಿಕೆ ನೀಡಿದ್ದಾರೆ. ಶಿಕ್ಷಕನ ವಿರುದ್ಧ ಇನ್ನೂ ಹಲವು ದೂರುಗಳಿರುವುದಾಗಿ ಹೇಳಲಾಗಿದೆ.