“ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಹೊಸಂಗಡಿಯಲ್ಲಿ CITU ಧರಣಿ”

ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಗೆದುರಾಗಿ citu ಹೊಸಂಗಡಿ ಪೋಸ್ಟ್ ಆಫೀಸ್ ಬಳಿ ಧರಣಿ ಸಂಘಟಿಸಲಾಯಿತು. ಧರಣಿ ಯನ್ನು citu ಜಿಲ್ಲಾ ಉಪಾಧ್ಯಕ್ಷೆ ಕಾo ಬೇಬಿ ಶೆಟ್ಟಿ ಉದ್ಘಾಟಿಸಿ ,ಕೇಂದ್ರ ಸರ್ಕಾರ ಪಶ್ಚಿಮ ಏಷ್ಯಾ ಯುದ್ದದ ಕಾರಣ ನೀಡಿ ಬಂಡವಾಳ ಶಾಹಿಗಳಿಗೆ ದೇಶದ ಬಡಜನತೆಯನ್ನೂ ಕೊಳ್ಳೆ ಒಡೆಯಲು ಲೈಸೆನ್ಸ್ ಕೊಟ್ಟಂತಾಗಿದೆ .

ನಗರ ಪ್ರದೇಶದಲ್ಲಿ ಹೋಟೆಲ್ ಗಳು ಬಂದ್ ಮಾಡಲಾಗಿದೆ ,ಆಹಾರ ಸಮೇತ ಸಿಗದ ಪರಿಸ್ಥಿತಿ ಬಂದಿದೆ .ಇದರಿಂದಾಗಿ ಕಾರ್ಮಿಕ ಕೆಲಸ ನಷ್ಟ ವಾಗಿದೆ, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಗೊಳಿಸಲು ಮುಂದಾಗಬೇಕು. ಊರಿನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮುಂದಾಗಬೇಕು ಎಂದು ಕರೆ ಇತ್ತರು .

ಚಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿದರು .ಸತೀಶ್ ಏಲಿಯಾನ , ರಾಬರ್ಟ್ ಡಿಸೋಜ, ಬಾಬು ವಾದ್ಯಪಡ್ಪು, ಉದಯ ಸಿ ಎಚ್ , ರವೀಂದ್ರ ಶೆಟ್ಟಿ ,ಕರುಣಾಕರ ಶೆಟ್ಟಿ ಮೊದಲಾದವರು ನೇತೃತ್ವ ನೀಡಿದರು .ಪ್ರಶಾಂತ್ ಕನಿಲ ಸ್ವಾಗತಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!