ಕಣ್ಣೂರು ವಾರ್ಡಿನಲ್ಲಿ ₹45 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡಿನ ಶ್ರೀ ವೈದ್ಯನಾಥ ದೇವಸ್ಥಾನದ ಬಳಿ ಕಾವೇರಂಗಡಿ ಯೋಗೀಶ್ ಮನೆಯವರೆಗೆ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಾಗಿಯು 45ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ನಂತರದ ಮಾತನಾಡಿದ ಶಾಸಕರು, ಇಲ್ಲಿನ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಂತೆ ಸುಮಾರು 300 ಮೀಟರ್ ಉದ್ದದ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಲಿದ್ದು, ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಾವತಿ ವಿಶ್ವನಾಥ್ ರವರ ವಿಶೇಷ ಪ್ರಯತ್ನದಿಂದ ಈ ಕಾಮಗಾರಿಯು ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶ್ರೀ ವೈದ್ಯನಾಥ ದೈವಸ್ಥಾನದ ಕಮಿಟಿ ಸದಸ್ಯರಾದ ಸಂತೋಷ್ ಶೆಟ್ಟಿ ಹಾಗೂ ಚಂದಪ್ಪ ಸಪಲ್ಯ, ದೇವದಾಸ್ ಶೆಟ್ಟಿ, ಚಂದ್ರಕಾಂತ್ ಸಪಲ್ಯ, ಪ್ರೇಮನಾಥ್ ಸಪಲ್ಯ, ವಿಕ್ರಂ ಶೆಟ್ಟಿ, ಯೋಗೀಶ್, ವಿಜಯ್ ಕಾವೇರಗಡಿ, ಕಿರಣ್, ಮೇಘರಾಜ್ ಶೆಟ್ಟಿ, ಯುವರಾಜ್ ಸುವರ್ಣ, ವಿವೇಕ್ ಸುವರ್ಣ, ಯಜ್ಞೆಶ್, ಸೇರಿದಂತೆ ಪರಿಸರದ ನಿವಾಸಿಗಳು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!