ಆಚಾರವಿಲ್ಲದ… ನಾಲಿಗೆಯಲ್ಲಿ ನೀಚ ಬುದ್ಧಿಯ ತೋರಿಸಿದ. ಪ್ರಮೋದ್ ನ ‘ಪ್ರಮಾದ.VSSC ಸಿಬ್ಬಂದಿ ಜಿಆರ್ ಪ್ರಮೋದ್ ಗೆ ಕಠಿಣ ಶಿಕ್ಷೆ ಆಗಬೇಕು

ತಿರುವನಂತಪುರ : ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದೇಶದ ಗರಿಮೆಯನ್ನು, ಹಿರಿಮೆಯನ್ನು ವಿಶ್ವ ರಾಷ್ಟ್ರಗಳ ಮುಂದೆ ಬಾನೆತ್ತರಕ್ಕೆ ಹಾರಿಸಿದ ನಮ್ಮ ಹೆಮ್ಮೆಯ ಸಂಸ್ಥೆ. ಇಂತಹ ಸಂಸ್ಥೆಗಳ ಸುಪರ್ದಿಯಲ್ಲಿ ಬರುವ ಇನ್ನೊಂದು ಸಂಸ್ಥೆಯೇ (vssc.) ವಿಕ್ರಂ ಸಾರಾಭಾಯಿ ಸ್ಪೆಸ್ ಸೆಂಟರ್. ಕೇಂದ್ರ ಸರಕಾರದ ಆದೀನ ದಲ್ಲಿ ಈ ಸಂಸ್ಥೆಯು ಕಾರ್ಯಾಚರಿಸುತ್ತಿದೆ.

ಇಂತಹ ಅಭಿಮಾನದ ನಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿರುವ G R ಪ್ರಮೋದ್ ಎಂಬಾತ ತನ್ನ ಮುಖಪುಟದ ಬ್ಲಾಗಿನಲ್ಲಿ ಭಾರತಾಂಬೆಯ ಕುರಿತು ಕೆಟ್ಟ ಶಬ್ದಗಳನ್ನು ಉಪಯೋಗಿಸಿ ಲೇಖನ ಮಾಡಿದ್ದು, ನಾಗರಿಕ ಸಮಾಜದ ಯಾವನೇ ವ್ಯಕ್ತಿಯು ಬಳಸಲಾಗದ ಪದವನ್ನು ಬಳಸಿಕೊಂಡು ಮೂರ್ಖತನದ ಪ್ರಮಾದವನ್ನು ಮಾಡಿದ್ದು ಇದೀಗ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾನೆ.


ಭಾರತೀಯತೆಯ ಬಗ್ಗೆ ಭಾರತ ಮಾತೆಯ ಬಗ್ಗೆ ಈ ಕೆಟ್ಟ ಶಬ್ದವನ್ನು ಈತ ಬಳಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಭಾರತ ಮಾತೆ ಮತ್ತು ಗೋಮಾತೆಯ ಬಗ್ಗೆ ಕೇವಲವಾಗಿ ನಾಲಿಗೆ ಹರಿದುಬಿಟ್ಟಈ ಭೂಪ ಕೇಂದ್ರ ಸರಕಾರದ ಉದ್ಯೋಗಿಯಾಗಿದ್ದು ಸರಕಾರದ ನೀತಿ ನಿಯಮಗಳ ವಿರುದ್ಧ ದಿನನಿತ್ಯ ಇದೇ ರೀತಿ ಲೇಖನ ಬರೆಯುತ್ತಿದ್ದಾನೆ.


ಸರಕಾರದ ನಿಯಮಗಳ ಪ್ರಕಾರ vscc ಸಂಸ್ಥೆಯ ಕಚೇರಿಯಲ್ಲಿ ಕರ್ತವ್ಯದ ಸಮಯದಲ್ಲಿ ಸ್ಮಾರ್ಟ್ ಫೋನ್ ಬಳಸುವಂತಿಲ್ಲ, ಕಚೇರಿ ಹಾಗೂ ಅಧಿಕೃತ ಕಾರ್ಯಗಳಿಗೆ ಬೇಕಾಗಿ ಕೇವಲ ಕೀಪ್ಯಾಡ್ ಫೋನನ್ನು ಮಾತ್ರ ಬಳಸಬೇಕೆಂಬ ಕಠಿಣ ನಿಯಮವಿದ್ದರೂ, ಇದೆಲ್ಲವನ್ನ ಗಾಳಿಗೆ ತೂರಿ ಕರ್ತವ್ಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರಕಾರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಲೇಖನಗಳನ್ನ ಬರೆಯುತ್ತಾನೆ.
ಎಡಪಕ್ಷ ಬೆಂಬಲಿತ ಕಾರ್ಮಿಕ ಸಂಘಟನೆಯ ಸದಸ್ಯನಾದ ಈತನು ತನ್ನ ಸಂಘಟನೆಯ ಮೇಲೆ ತೋರಿಸುವ ನಿಷ್ಠೆಯನ್ನು ತನ್ನ ಇಲಾಖೆಯ ಮೇಲೆ ತೋರಿಸದಿರುವುದು ವಿಪರ್ಯಾಸವಾಗಿದೆ.


ಇದೀಗ ಭಾರತ ಮಾತೆ ಮತ್ತು ದೇಶಿಯತೆಯ ಬಗ್ಗೆ ನೀಚ ಶಬ್ದಗಳಿಂದ ಸಾಮಾಜಿಕ ಜಾಲತಾಣಗಳಿಗೆ ಲೇಖನಗಳನ್ನು ಬರೆದು ಕರ್ತವ್ಯ ಲೋಪ ವನ್ನು ಮಾಡಿದ ಇವನ ವಿರುದ್ಧ ಭಾರತೀಯ ಪೋಸ್ಟಲ್ ಎಂಪ್ಲಾಯೇಸ್ ಯೂನಿಯನ್ ರಾಜ್ಯಪಾಲರಿಗೂ, ಪ್ರಧಾನ ಮಂತ್ರಿಗಳಿಗೂ ವಿ ಎಸ್ ಎಸ್ ಸಿ ಚೇರ್ಮನ್ ರವರಿಗೆ ದೂರು ನೀಡಿದೆ. ಮತ್ತು ಈತನ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಿದೆ .


ಪ್ರಮೋದ್ ಕೇಂದ್ರ ಸರಕಾರದ ನೀತಿಗೆ ಎದುರಾಗಿ, ಸರಕಾರಿ ನಿಯಮದ ಉಲ್ಲಂಘನೆ, ಭಾರತೀಯತೆ ಮತ್ತು ದೇಶಿಯತೆಗೆ ದಕ್ಕೆ ಬರುವಂತಹ ಶಬ್ದಗಳ ಬಳಕೆ ಹಾಗೂ ಕರ್ತವ್ಯ ಲೋಪದಂತಹ ಆರೋಪವನ್ನು ಇದೀಗ ಈ ಭೂಪ ಎದುರಿಸುತ್ತಿದ್ದಾನೆ.
ಇಂತಹ ಮಾನಸಿಕ ಅಸ್ವಸ್ಥತೆ ಇರುವ ಜನರಿಗೆ ತಕ್ಕ ಶಿಕ್ಷೆಯಾಗಿ ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಆಗಬೇಕಿದೆ. ಭಾರತಾಂಬೆಯ ಹಾಗೂ ಗೋಮಾತೆಯ ಬಗ್ಗೆ ನೀಚ ಶಬ್ದಗಳನ್ನು ಉಪಯೋಗಿಸಿದ ಜಿ ಆರ್ ಪ್ರಮೋದ್ ಎಂಬ ಮೂರ್ಖನಿಗೆ ಲಭಿಸುವ ಶಿಕ್ಷೆಯು ಮುಂದಿನ ದಿನಗಳಲ್ಲಿ ಒಂದು ಪಾಠವಾಗಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!