ಒಂದು ಊರಲ್ಲಿ ಗಂಡ ಹೆಂಡತಿ ಇದ್ರು, ಹೆಂಡತಿ ಜಗಳಗಂಟಿಯಾಗಿದ್ದಳು, ಪ್ರತೀ ದಿನ ಯಾವುದಾದರೂ ಒಂದು ಕಾರಣ ಇಟ್ಕೊಂಡು, ಗಂಡನ ಜೊತೆಗೆ ಜಗಳ ಮಾಡುತ್ತಿದ್ದಳು,
ಕಾರಣ ಅವಳು ತಂದೆ ತಾಯಿ ಮುದ್ದಿನಿಂದ ಸಾಕಿದ ಅವರ ಒಬ್ಬಳೇ ಮಗಳು, ನನ್ನನ್ನು ಗಂಡ ಬಿಟ್ಟರೂ ಕೊನೆವರೆಗೂ ಹೆತ್ತವರು ನೋಡಿಯಾರು ಎಂಬ ಭ್ರಮೆ ಅವಳ ಮನಸ್ಸಿನಲ್ಲಿತ್ತು
ಹೀಗೆ ಮುಂದುವರಿದು ಒಂದು ದಿನ ಗಂಡನಲ್ಲಿ ಜಗಳ ಮಾಡ್ತಾ ಇರಬೇಕಾದ್ರೆ ಇವಳಿಗೆ ಎದೆ ನೋವು ಸುರು ಆಯ್ತು, ಗಂಡನಲ್ಲಿ ಹೇಳದೆ ತವರು ಮನೆಗೆ ಹೋಗಿ ಹೆತ್ತವರ ಜೊತೆ ಆಸ್ಪತ್ರೆಗೆ ಹೋದಳು, ಅಲ್ಲಿ ಡಾಕ್ಟರ್ ಪರಿಶೀಲಿಸಿದಾಗ ಹೃದಯ ಆಪರೇಷನ್ ಮಾಡಬೇಕು ಅಂದ್ರು, ಇತ್ತ ಗಂಡನಿಗೆ ಗೊತ್ತಾಗಿ ಅವನು ಡಾಕ್ಟರ್ ಬಳಿ ಬಂದು ಕೇಳಿದಾಗ ಅವರು ಹೃದಯ ಚೇಂಜ್ ಮಾಡಬೇಕು, ಇಲ್ಲಾಂದ್ರೆ ತೊಂದರೆ ಅಂದ್ರು….ಒಂದು ವಾರದೊಳಗೆ ವ್ಯವಸ್ಥೆ ಮಾಡುತ್ತೇನೆ ಅಂದು, ಹೆಂಡತಿಗೆ ಗೊತ್ತಾಗದ ಹಾಗೇ ತನ್ನ ಮನೆಗೆ ಬಂದ.
ಇತ್ತ ಹೆಂಡತಿಗೆ ಆಪರೇಷನ್ ಭಯದಿಂದ, ಗಂಡನ ನೆನಪಾಗಿ , ಅವನನ್ನು ಕರೆಸಿದಳು,ಹಾಸಿಗೆಯ ಮೇಲೆ ಮಲಗಿ ತನ್ನ ಗಂಡನ ಕೈ ಹಿಡಿದು ಹೇಳಿದಳು “ಇಂದು ನನ್ನ ಹೃದಯದ ಆಪರೇಷನ್ ಇದೆ…..”ಎಂದು..
ಗಂಡ ನಕ್ಕು ಹೇಳಿದ “ನನಗೆಲ್ಲಾ ಗೊತ್ತಿದೆ, ಹೆದರುವ ಅಗತ್ಯವಿಲ್ಲ. ನಾನು ಇಲ್ಲೇ ಇದ್ದೇನೆ” ಎಂದು
ಹೆಂಡತಿ ನಿದಾನವಾಗಿ ಹೇಳಿದಳು “I Love You Jaan”
ಗಂಡ ಕೂಡ ಉತ್ತರಿಸಿದ “Love you too… ನನ್ನ ಜೀವವೇ..!
ಆಪರೇಷನ್ ನಂತರ ಅವಳಿಗೆ ಪ್ರಜ್ಞೆ ಬಂದಾಗ ರೂಮಿನಲ್ಲಿ ಕೇವಲ ಅವಳ ತಂದೆ ತಾಯಿ ನಿಂತಿದ್ದರು.
ಅವಳು ಗಾಬರಿಯಿಂದ ಕೇಳಿದಳು “ನನ್ನ ಪತಿ ಎಲ್ಲಿದ್ದಾರೆ…?
ತಂದೆಯ ಕಣ್ಣುಗಳು ತುಂಬಿ ಬಂದವು. ಅವರು ಹೇಳಿದರು
“ಮಗಾ ಅವನೇ ನಿನಗೆ ಹೃದಯ ಕೊಟ್ಟು ಹೊರಟು ಹೋದ”… ಇದನ್ನು ಕೇಳಿದ ತಕ್ಷಣ ಅವಳು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದಳು.
ಆಗಲೇ ಅವಳ ಎದೆಯಿಂದ ಒಂದು ದ್ವನಿ ಕೇಳಿಸಿತು
“ಅಳಬೇಡ ಹುಚ್ಚಿ ನಾನು ಎಲ್ಲೂ ಹೋಗಿಲ್ಲ, ನಾನು ನಿನ್ನ ಹೃದಯದಲ್ಲಿ ಶಾಶ್ವತವಾಗಿ “ಜೀವಂತ”ವಾಗಿದ್ದೇನೆ”❤️❤️
“ಅವನು ಹೊರಟು ಹೋದ……ಆದರೆ ಹೃದಯದಲ್ಲಿ ಶಾಶ್ವತವಾಗಿ ಉಳಿದು ಹೋದ…”
✍️ಬರಹ:- ಉದಯಮಲ್ಲಿ, ಅಮ್ಮ್ಚಿ ಕೆರೆ,
ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು