ಕೇರಳದ ಪ್ರಿಯದರ್ಶಿನಿ ಯೋಜನೆಗೆ ಗಡಿ ಭಾಗದ ಮಹಿಳೆಯರಿಂದ ಭಾರಿ ಮೆಚ್ಚುಗೆ

ಮಂಗಳೂರು: ಮಹಿಳೆಯರು ಮತ್ತು ಲಿಂಗಪರಿವರ್ತಿತರಿಗೆ ಕೇರಳ ಸರ್ಕಾರ ಜಾರಿಗೆ ತಂದಿರುವ ಪ್ರಿಯದರ್ಶಿನಿ ಉಚಿತ ಬಸ್ ಪ್ರಯಾಣ ಯೋಜನೆ ಗಡಿ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.

ಕಾಸರಗೋಡಿನಿಂದ ಮಂಗಳೂರಿಗೆ ಶಿಕ್ಷಣಕ್ಕಾಗಿ ಪ್ರತಿದಿನ ಪ್ರಯಾಣಿಸುವ ವಿದ್ಯಾರ್ಥಿನಿಯರಿಗೆ ಈ ಯೋಜನೆ ಹೆಚ್ಚಿನ ಅನುಕೂಲವಾಗಿದ್ದು, ಪ್ರಯಾಣ ವೆಚ್ಚದ ಹೊರೆ ಕಡಿಮೆಯಾಗಿದೆ.

ಅಷ್ಟೇ ಅಲ್ಲದೆ, ಆರೋಗ್ಯ ಸೇವೆಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿರುವ ಕಾಸರಗೋಡು ಭಾಗದ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಯೋಜನೆ ನೆರವಾಗುತ್ತಿದೆ. ಗಡಿ ಪ್ರದೇಶದ ಜನರ ದೈನಂದಿನ ಸಂಚಾರವನ್ನು ಸುಲಭಗೊಳಿಸಿರುವ ಈ ಯೋಜನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!