ಇಸ್ಕಾನ್ ಮಂಗಳೂರಿನಲ್ಲಿ ಭಗವದ್ಗೀತೆ ಹಾಗೂ ಗುರುಕುಲ ತರಗತಿಗಳಿಗೆ ಆಹ್ವಾನ

ಮಂಗಳೂರು: ಇಸ್ಕಾನ್ ಮಂಗಳೂರು ವತಿಯಿಂದ ಮಕ್ಕಳ, ಪೋಷಕರ, ಭಕ್ತರ ಹಾಗೂ ಸಾರ್ವಜನಿಕರಿಗಾಗಿ ವಿಶೇಷ ಆಧ್ಯಾತ್ಮಿಕ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜುಲೈ 5, 2026ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಿವಿಎಸ್ ಕಲಾಕುಂಜ್‌ನಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ‘ಸಂಡೇ ಗುರುಕುಲ – ಐಸಿವಿಕೆ’ ಹಾಗೂ ‘ಗೀತಾ ಲೈಫ್’ ಹೆಸರಿನ 20 ಅವಧಿಗಳ ಭಗವದ್ಗೀತೆ ಕೋರ್ಸ್ ನಡೆಯಲಿದೆ.

ಭಗವದ್ಗೀತೆಯ ತತ್ವಜ್ಞಾನ, ಭಾರತೀಯ ಸಂಸ್ಕೃತಿ, ಮೌಲ್ಯಾಧಾರಿತ ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದಿಂದ ಉತ್ತಮ ಮೌಲ್ಯಗಳು, ಆತ್ಮವಿಶ್ವಾಸ, ಏಕಾಗ್ರತೆ, ಶಿಸ್ತು, ಮಾನಸಿಕ ನೆಮ್ಮದಿ ಹಾಗೂ ಕುಟುಂಬದ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಪೋಷಕರೂ ಮಕ್ಕಳೊಂದಿಗೆ ಭಾಗವಹಿಸುವಂತೆ ವಿಶೇಷವಾಗಿ ಪ್ರೋತ್ಸಾಹಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 8722833650 ಹಾಗೂ 72598 62303 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!