ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ನೇತೃತ್ವದಲ್ಲಿ ಯುವಶಕ್ತಿ ಫ್ರೆಂಡ್ಸ್ ಗ್ರಂಥಾಲಯ ಸುಭಾಷ್ ನಗರದ ಸಹಯೋಗದೊಂದಿಗೆ ಜಿ.ಯಚ್. ಎಸ್ .ಎಸ್ ಬೇಕೂರಿನಲ್ಲಿ ತಾಲೂಕು ಮಟ್ಟದ ವಾಚನ ಪಕ್ಷಾಚರಣೆಯ ಸಮಾರೋಪ ಹಾಗೂ ಐವಿ ದಾಸ್ ರ ಸಂಸ್ಕರಣೆಯು ನಡೆಯಿತು.
ರಾಜ್ಯ ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿಯಾಗಿದ್ದ ನ್ಯಾಯವಾದಿ ಪಿ ಅಪ್ಪು ಕುಟ್ಟನ್ ರವರು ಉದ್ಘಾಟಿಸಿದರು. ಕೇರಳ ರಾಜ್ಯ ಲೈಬ್ರರಿಯ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಮಾಸ್ಟರ್ ಸಂಸ್ಕರಣೆ ನಡೆಸಿದರು. ಪ್ರಾಂಶುಪಾಲರಾದ ಬಾಲಕೃಷ್ಣ, ಶಾಲಾ ಮುಖೋಪಾಧ್ಯಾಯಿನಿ ಲಕ್ಷ್ಮಿ ಟೀಚರ್, ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ ಶುಭ ಹಾರೈಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀ ಕುಮಾರಿ ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ಕಮಲಾಕ್ಷ .ಡಿ ಸ್ವಾಗತಿಸಿದರು. ಯುವಶಕ್ತಿ ಗ್ರಂಥಾಲಯದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ,ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ದಾಸಪ್ಪ ಶೆಟ್ಟಿ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ವಂದಿಸಿದರು.
ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಸುಭಾಷ್ ಗ್ರಂಥಾಲಯದ ವತಿಯಿಂದ ಪುಸ್ತಕ ಪ್ರದರ್ಶನ ನಡೆಯಿತು.