ಒಕ್ಕಲಿಗರ ಕುರಿತು ಶಾಸಕ ವಿಶ್ವನಾಥ್ ಹೇಳಿಕೆ: ಪುತ್ತೂರಿನಲ್ಲಿ ತೀವ್ರ ಆಕ್ರೋಶ

ಪುತ್ತೂರು: “ಸಾಮಾನ್ಯವಾಗಿ ಹಳೇ ಮೈಸೂರು ಭಾಗದವರನ್ನು ಮಾತ್ರ ಒಕ್ಕಲಿಗರು ಎನ್ನಲಾಗುತ್ತದೆ, ಅವರೇನೂ ದೊಡ್ಡ ಗೌಡರಲ್ಲ” ಎಂದು ಯಲಹಂಕ ಶಾಸಕ ವಿಶ್ವನಾಥ್‌ ನೀಡಿರುವ ಹೇಳಿಕೆಗೆ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕರ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಮತ್ತು ಚಿದಾನಂದ ಬೈಲಾಡಿ, ಆಗ್ರಹಿಸಿದ್ದಾರೆ.

“ಇಲ್ಲದಿದ್ದಲ್ಲಿ ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಸಮುದಾಯದಿಂದ ಕಾನೂನಾತ್ಮಕವಾಗಿ ಅಥವಾ ಇತರ ಮಾರ್ಗದಲ್ಲಿ ಹೋರಾಟ ನಡೆಸಲಾಗುವುದು” ಎಂದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಧ‌ರ್ ಗೌಡ ಪಾಣತ್ತಿಲ, ಚಿದಾನಂದ ಬೈಲಾಡಿ, ರವಿ ಮುಂಗ್ಲಿಮನೆ, ಶ್ರೀಧರ್ ಗೌಡ ಕಣಜಾಲು ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!