ಶ್ರೀ ಇರಾ ನೇಮು ಪೂಜಾರಿಯವರೀಗೆ “ರಾಷ್ಟ್ರಕವಿ ಗೋವಿಂದ ಪೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026.ಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ, ಅಧ್ಯಕ್ಷರಾಗಿ ಪ್ರಸ್ತುತ ಗೌರವ ಅಧ್ಯಕ್ಷರಾಗಿ, ಸಾಹಿತ್ಯ ಲೋಕಕ್ಕೆ ನೀಡಿದ ಅನುಪಮ ಸೇವೆ, ಕಾರ್ಕಳ “ಕವಿರತ್ನಾಕರವರ್ಣಿ “ವಿದ್ಯಾಪೀಠದ ಮತ್ತು ಮೂಡಿಗೆರೆ ಹೊಯ್ಸಳ ವಿದ್ಯಾಪೀಠದ ಪ್ರಾಂಶುಪಾಲರಾಗಿ ಮಾಡಿದ ಸಾಹಿತ್ಯ ಸೇವೆ, ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ, ಇವರೀಗೆ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಪ್ರಯುಕ್ತ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪದವಿ ಸೇವಾಕಾಂಕ್ಷಿ ಡಾ. ಸೋಮಶೇಖರ್ ಐ. ಎ. ಎಸ್. ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ “ಕರ್ನಾಟಕ -ಗಡಿನಾಡು ಕನ್ನಡ ಸಮ್ಮೇಳನ “ದಲ್ಲಿ ಶ್ರೀ. ಇರಾ ನೇಮು ಪೂಜಾರಿ ಯವರಿಗೆ “ರಾಷ್ಟ್ರಕವಿ ಗೋವಿಂದ ಪೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026.ನೀಡಿ ಗೌರವಿಸಲಾಗುವುದು ಎಂದು “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ -26.7.2026.ಸಮ್ಮೇಳನಾಧ್ಯಕ್ಷರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ಕೆ. ವಾಮನ್ ರಾವ್ ಬೇಕಲ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!