ಬ್ರಷ್ ಮಾಡುವಾಗ ನೀವೂ ಈ ತಪ್ಪುಗಳನ್ನು ಮಾಡುತ್ತಿದ್ದೀರಾ? ಹಲ್ಲಿನ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ತಪ್ಪಿಸಿ

ಪ್ರತಿದಿನ ಹಲ್ಲುಗಳನ್ನು ಬ್ರಷ್ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಹಲ್ಲು ತೊಳೆಯುವಾಗ ನಾವು ತಿಳಿಯದೆ ಮಾಡುವ ಕೆಲವು ತಪ್ಪುಗಳು ಹಲ್ಲು ಮತ್ತು ಹಲ್ಲಿನ ಮಾಂಸದ (ಗಂಸ್) ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ದಂತ ವೈದ್ಯರು ಎಚ್ಚರಿಸುತ್ತಿದ್ದಾರೆ. ಸಾಮಾನ್ಯ ಬ್ರಷ್, ಎಲೆಕ್ಟ್ರಿಕ್ ಟೂತ್ ಬ್ರಷ್ ಅಥವಾ ಸ್ಮಾರ್ಟ್ ಬ್ರಷ್ ಯಾವುದನ್ನೇ ಬಳಸಿದರೂ ಈ ತಪ್ಪುಗಳನ್ನು ತಪ್ಪಿಸುವುದು ಮುಖ್ಯ.

ಬ್ರಷ್ ಮಾಡಿದರೆ ಸಾಕು ಎಂದು ಭಾವಿಸಬೇಡಿ
ಬ್ರಷ್ ಮಾಡಿದ ಬಳಿಕ ಹಲ್ಲುಗಳು ಸಂಪೂರ್ಣ ಸ್ವಚ್ಛವಾಗಿವೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಹಲ್ಲುಗಳ ನಡುವಿನ ಸಣ್ಣ ಆಹಾರ ಕಣಗಳು ಬ್ರಷ್‌ನಿಂದ ಸಂಪೂರ್ಣವಾಗಿ ಹೊರಬರುವುದಿಲ್ಲ. ಇದರಿಂದ ಹಲ್ಲು ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಬ್ರಷ್ ಮಾಡಿದ ನಂತರ ಸಾಮಾನ್ಯ ಡೆಂಟಲ್ ಫ್ಲಾಸ್ ಅಥವಾ ವಾಟರ್ ಫ್ಲಾಸರ್ ಬಳಸುವುದು ಉತ್ತಮ.

ತುಂಬಾ ಗಟ್ಟಿಯಾದ ಬ್ರಷ್ ಬಳಸಬೇಡಿ
ಗಟ್ಟಿಯಾದ ಬ್ರಷ್ ಬಳಸಿ ಹೆಚ್ಚು ಒತ್ತಡದಿಂದ ಹಲ್ಲು ತೊಳೆಯುವುದು ಹಲ್ಲಿನ ಮಾಂಸಕ್ಕೆ ಹಾನಿಕಾರಕ. ಇದರಿಂದ ಗಂಸ್‌ನಿಂದ ರಕ್ತಸ್ರಾವ, ಗಾಯ ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು. ಮೃದುವಾದ ಬ್ರಷ್ ಬಳಸುವುದು ಉತ್ತಮ.

ಬ್ರಷ್ ನ್ನು ವೃತ್ತಾಕಾರವಾಗಿ ಚಲಿಸಿ
ಹಲವರು ಬ್ರಷ್ ನ್ನು ಮೇಲಿಂದ ಕೆಳಗೆ ಅಥವಾ ಕೆಳಗಿಂದ ಮೇಲಕ್ಕೆ ಬಲವಾಗಿ ಚಲಿಸಿ ಹಲ್ಲು ತೊಳೆಯುತ್ತಾರೆ. ಇದು ಹಲ್ಲು ಹಾಗೂ ಗಂಸ್‌ಗೆ ಒಳ್ಳೆಯದಲ್ಲ. ಬದಲಾಗಿ ಬ್ರಷ್ ಅನ್ನು ಮೃದುವಾಗಿ ವೃತ್ತಾಕಾರ (Circular) ರೀತಿಯಲ್ಲಿ ಚಲಿಸಿ ಹಲ್ಲು ತೊಳೆಯುವುದು ಉತ್ತಮ.

ದಿನಕ್ಕೆ ಒಮ್ಮೆ ಮಾತ್ರ ಬ್ರಷ್ ಮಾಡಬೇಡಿ
ರಾತ್ರಿ ಊಟದ ಬಳಿಕ ಬಾಯಿ ಚೆನ್ನಾಗಿ ತೊಳೆದರೂ ಹಲ್ಲುಗಳ ನಡುವೆ ಆಹಾರ ಕಣಗಳು ಉಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೆಳಿಗ್ಗೆ ಮಾತ್ರವಲ್ಲ, ರಾತ್ರಿ ಮಲಗುವ ಮೊದಲು ಕೂಡ ಹಲ್ಲು ಬ್ರಷ್ ಮಾಡುವುದು ಮತ್ತು ಫ್ಲಾಸ್ ಬಳಸುವುದು ಹಲ್ಲಿನ ಆರೋಗ್ಯಕ್ಕೆ ಅತ್ಯಗತ್ಯ.

SHARE
Loading spinner

Leave a Reply

Your email address will not be published. Required fields are marked *

error: Content is protected !!