ಮಂಗಳೂರು-ಚೆನ್ನೈ ಮಧ್ಯೆ ವಿಶೇಷ ರೈಲು: ಓಣಂ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ

ಮಂಜೇಶ್ವರ: ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಮಂಗಳೂರು-ಚೆನ್ನೈ ನಡುವೆ ರೈಲ್ವೆ ಇಲಾಖೆಯು ಹೊಸ ವಿಶೇಷ ರೈಲನ್ನು ಘೋಷಿಸಿದೆ. ಈ ರೈಲು ಜುಲೈ 13 ರಿಂದ ಆಗಸ್ಟ್ 31ರವರೆಗೆ ಕಾರ್ಯನಿರ್ವಹಿಸಲಿದೆ. ಪ್ರತಿ ಸೋಮವಾರ ಸಂಜೆ 4 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು, ಮರುದಿನ ಬೆಳಗ್ಗೆ 10.55ಕ್ಕೆ ಚೆನ್ನೈ ತಲುಪಲಿದೆ. ವಾಪಸ್ ಚೆನ್ನೈನಿಂದ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹೊರಟು, ಬುಧವಾರ ಬೆಳಗ್ಗೆ 8.40ಕ್ಕೆ ಮಂಗಳೂರು ತಲುಪಲಿದೆ. ಈ ರೈಲಿನಲ್ಲಿ 2 ಸೆಕೆಂಡ್ ಎಸಿ, 8 ಥರ್ಡ್ ಎಸಿ, 6 ಸ್ಲೀಪರ್ ಮತ್ತು 4 ಜನರಲ್ ಕೋಚ್‌ಗಳ ವ್ಯವಸ್ಥೆ ಇರಲಿದೆ.


​ಕಾಸರಗೋಡು, ಕಾಂಞಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ್ಯೇರಿ, ವಡಕರ, ಕೋಯಿಕ್ಕೋಡ್, ತಿರೂರು, ಶೊರ್ನೂರು, ಪಾಲಕ್ಕಾಡ್, ತಿರುಪ್ಪೂರು, ಈರೋಡ್, ಸೇಲಂ, ಜೋಲಾರ್‌ಪೇಟೆ, ಕಾಟ್ಪಾಡಿ, ಆರ್‌ಕೋಣಂ ಮತ್ತು ಪೆರಂಬೂರಿನಲ್ಲಿ ರೈಲಿಗೆ ನಿಲುಗಡೆ ಕಲ್ಪಿಸಲಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!