ಜು. 12ರಂದು ‘ಬಿ ದಿ ಬಿಂದು ಬ್ರೈಡ್’ ಗ್ರ್ಯಾಂಡ್ ಫಿನಾಲೆ

ಅಂತಿಮ ಸುತ್ತಿನಲ್ಲಿ 20 ಸ್ಪರ್ಧಿಗಳು; ವಿಜೇತೆಗೆ ಬಿಂದು ಜ್ಯುವೆಲ್ಲರಿಯ ಅಧಿಕೃತ ಬ್ರ್ಯಾಂಡ್ ಮಾಡೆಲ್ ಆಗುವ ಅವಕಾಶ

ಮಂಗಳೂರು, ಜು. 10: ವಿಶ್ವಾಸ, ಕರಕುಶಲತೆ ಹಾಗೂ ಗುಣಮಟ್ಟದ ಸೇವೆಯ ನಾಲ್ಕು ದಶಕಗಳ ಯಶಸ್ವಿ ಪಯಣವನ್ನು ಆಚರಿಸುತ್ತಿರುವ ಬಿಂದು ಜ್ಯುವೆಲ್ಲರಿಯ ವಿಶೇಷ ವಧು ಪ್ರತಿಭಾ ಅನ್ವೇಷಣಾ ಕಾರ್ಯಕ್ರಮ ‘ಬಿ ದಿ ಬಿಂದು ಬ್ರೈಡ್’ ಗ್ರ್ಯಾಂಡ್ ಫಿನಾಲೆ ಜುಲೈ 12ರಂದು (ಭಾನುವಾರ) ಮಧ್ಯಾಹ್ನ 2 ಗಂಟೆಗೆ ನಗರದ ಎಕ್ಕೂರಿನ ಎ.ಜೆ. ಗ್ರ್ಯಾಂಡ್ ಎಲೈಟ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಬಿಂದು ಜ್ಯುವೆಲ್ಲರಿಯ ಮಾರುಕಟ್ಟೆ ವಿಭಾಗದ ಪ್ರಮುಖ ಅಭಿಷೇಕ್ ಆಳ್ವ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಆಭರಣ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿ ವಧು ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಬಿಂದು ಜ್ಯುವೆಲ್ಲರಿಯ ವಿವಿಧ ಶೋರೂಂಗಳಲ್ಲಿ 11 ದಿನಗಳ ಕಾಲ ನಡೆದ ಅಭಿಯಾನದಲ್ಲಿ 500ಕ್ಕೂ ಹೆಚ್ಚು ಯುವತಿಯರು ನೋಂದಾಯಿಸಿದ್ದು, ಪ್ರಾಥಮಿಕ ಆಯ್ಕೆ ಪ್ರಕ್ರಿಯೆಯ ಬಳಿಕ 233 ಮಂದಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದರು. ವಿವಿಧ ಸುತ್ತಿನ ಮೌಲ್ಯಮಾಪನದ ನಂತರ ಅಂತಿಮವಾಗಿ 20 ಮಂದಿ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದು, ಪ್ರತಿಷ್ಠಿತ ‘ಬಿ ದಿ ಬಿಂದು ಬ್ರೈಡ್’ ಪಟ್ಟಕ್ಕಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದರು.

ವೈಶಿಷ್ಟ್ಯಪೂರ್ಣ ವೇದಿಕೆ

ಸಾಮಾನ್ಯ ಕುಟುಂಬಗಳ ಯುವತಿಯರು ಹಾಗೂ ವಧುವಾಗುವ ಕನಸು ಹೊಂದಿರುವ ಮಹಿಳೆಯರಿಗೆ ವೃತ್ತಿಪರ ಫ್ಯಾಷನ್ ಮತ್ತು ಬ್ರ್ಯಾಂಡ್ ಪ್ರತಿನಿಧಿತ್ವ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಕಾರ್ಯಕ್ರಮ ಅಪರೂಪದ ಅವಕಾಶ ಕಲ್ಪಿಸಿದೆ. ಸ್ಪರ್ಧಿಗಳಿಗೆ ವಧು ಅಲಂಕಾರ, ಗ್ರೂಮಿಂಗ್, ವೃತ್ತಿಪರ ಫೋಟೋಶೂಟ್, ವೇದಿಕೆ ನಿರ್ವಹಣೆ ಹಾಗೂ ಕ್ಷೇತ್ರದ ಪರಿಣಿತರೊಂದಿಗೆ ಸಂವಾದ ಸೇರಿದಂತೆ ವಿವಿಧ ಹಂತಗಳ ವಿಶೇಷ ತರಬೇತಿಯನ್ನು ನೀಡಲಾಗಿದೆ ಎಂದು ಅಭಿಷೇಕ್ ಆಳ್ವ ಹೇಳಿದರು.

ವಿಜೇತೆಗೆ ಬ್ರ್ಯಾಂಡ್ ಮಾಡೆಲ್ ಅವಕಾಶ

ಆಡಿಷನ್, ಗ್ರೂಮಿಂಗ್, ಫೋಟೋಶೂಟ್ ಹಾಗೂ ವಿವಿಧ ಮೌಲ್ಯಮಾಪನ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಂತಿಮ 20 ಮಂದಿ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ತೀರ್ಪುಗಾರರ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ವಿಜೇತೆಯು ಬಿಂದು ಜ್ಯುವೆಲ್ಲರಿಯ ಅಧಿಕೃತ ಬ್ರ್ಯಾಂಡ್ ಮಾಡೆಲ್ ಆಗಿ ಆಯ್ಕೆಯಾಗಲಿದ್ದು, ಸಂಸ್ಥೆಯ ಜಾಹೀರಾತು, ಪ್ರಚಾರ ಹಾಗೂ ವಿವಿಧ ಮಾರ್ಕೆಟಿಂಗ್ ಅಭಿಯಾನಗಳಲ್ಲಿ ಬ್ರ್ಯಾಂಡ್ ಅನ್ನು ಪ್ರತಿನಿಧಿಸುವ ಅವಕಾಶ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಂದು ಜ್ಯುವೆಲ್ಲರಿಯ ಪ್ರಮುಖರಾದ ಮುನಾವರ್, ದೀಕ್ಷಿತ್, ಧೀರಜ್ ಹಾಗೂ ಶ್ವೇತಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!