ವಿಟ್ಲ: ಜೆಸಿಐ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ ಸಿಟಿ, ಟೀಮ್ ಪುಣ್ಯಕೋಟಿ, ಬಿಲ್ಲವ ಸಂಘ ಹಾಗೂ ಮಹಿಳಾ ಬಿಲ್ಲವ ಸಂಘಗಳ ಆಶ್ರಯದಲ್ಲಿ ಟೀಮ್ ಉಬರ್ ನೇತೃತ್ವದಲ್ಲಿ ಆಯೋಜಿಸಲಾದ ಹಲಸು ಮೇಳಕ್ಕೆ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ್ ಶೆಟ್ಟಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಲಯನ್ಸ್ನ ಮಾಜಿ ರಾಜ್ಯಪಾಲೆ ಡಾ. ಗೀತಾ ಪ್ರಕಾಶ್, ನಿಕಟ ಪೂರ್ವ ಪಿಆರ್ಒ ಸುದರ್ಶನ್ ಪಡಿಯರ್, ಜೆಸಿಐ ವಿಟ್ಲ ಅಧ್ಯಕ್ಷ ಸಂದೀಪ್, ಟೀಮ್ ಪುಣ್ಯಕೋಟಿ ಅಧ್ಯಕ್ಷ ಜಿತೇಶ್ ಕುಳ್ಳಾಲ್, ವ್ಯವಸ್ಥಾಪಕರಾದ ರಾಜೇಶ್ ಪ್ರಭು, ರಾಕೇಶ್ ಪ್ರಭು (ಉಪ್ಪಿನಂಗಡಿ) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಲಸಿನ ಕೃಷಿಗೆ ಉತ್ತೇಜನ ನೀಡುವ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾದ ಮೇಳದಲ್ಲಿ ವಿವಿಧ ತಳಿಯ ಹಲಸಿನ ಹಣ್ಣುಗಳು ಹಾಗೂ ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಆಹಾರ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

