160ಕ್ಕೂ ಹೆಚ್ಚು ಮೀನಿನ ಪೆಟ್ಟಿಗೆ ಕಳವು; ಕೆಲವೇ ಗಂಟೆಗಳಲ್ಲಿ ಆರೋಪಿ ಸೆರೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಬದಿಯ ಮೀನು ಮಾರಾಟ ಮಳಿಗೆಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಪೆಟ್ಟಿಗೆಗಳನ್ನು ಕಳವುಗೈದ ಪ್ರಕರಣದಲ್ಲಿ ಮೇಲ್ಪರಂಬ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಉದುಮ ಬಂಗರಕುನ್ನು ನಿವಾಸಿ ಸಿ.ಎ. ಸಲೀಂ (41) ಬಂಧಿತ ಆರೋಪಿ.

​ಮಳಿಗೆಯ ಮಾಲೀಕ ಟಿ.ಎಸ್. ರಹೀಂ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿಯು ಕಳೆದ ಕೆಲವು ದಿನಗಳಿಂದ ಒಟ್ಟು 160ಕ್ಕೂ ಹೆಚ್ಚು ಮೀನಿನ ಪೆಟ್ಟಿಗೆಗಳನ್ನು ಕಳವು ಮಾಡಿದ್ದು, ಇದರ ಮೌಲ್ಯ ಒಂದೂವರೆ ಲಕ್ಷ ರೂಪಾಯಿಗೂ ಅಧಿಕವಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಾಲೀಕರು ನೀಡಿದ ಸುಳಿವನ್ನು ಆಧರಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!