ಮಂಗಳೂರು : ಶ್ರೀ ದುರ್ಗಾದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರ ದೈವಗಳ ಸಾನಿಧ್ಯ ತೌಡುಗೋಳಿ ಇದರ ಜೀರ್ಣೋದ್ದಾರದ ವಿಜ್ಞಾಪನ ಪತ್ರವನ್ನು ಶ್ರೀ ಕ್ಷೇತ್ರದಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.


ವಿಜ್ಞಾಪನ ಪತ್ರ ಬಿಡುಗಡೆ ಬಳಿಕ ಮಾತನಾಡಿದ ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಈ ಒಂದು ದೇವತಾ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದು ಹೇಳಿದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಗೋವಿಂದ ಗುರುಸ್ವಾಮಿಯವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಅಧ್ಯಕ್ಷರು ಮತ್ತು ಇತರ ಗಣ್ಯರು ಅವರೊಂದಿಗೆ ದೀಪ ಬೆಳಗಿಸಲು ಕೈಜೋಡಿಸಿದರು.

ಈ ದೇವತಾ ಕೆಲಸವನ್ನು ನಮ್ಮ ಕೆಲಸ ಎಂದು ತೆಗೆದುಕೊಂಡು ಜೀರ್ಣೋದ್ಧಾರಕ್ಕೆ ಸಮಯಕೊಟ್ಟರೆ ಬೇಗ ಪೂರ್ತಿ ಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಲೆಕ್ಚರರ್ ಮುರಳೀಧರ ನಾಯ್ಕ್ ಅಭಿಪ್ರಾಯಪಟ್ಟರು.

ಮುಂದೆ ನಡೆಯಲಿರುವ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾಣದ ಕೆಲಸಗಳು ನಡೆಯಲು ನಾವೆಲ್ಲ ಕೈಜೋಡಿಸೋಣ ಎಂದು ಸಮಿತಿಯ ಮಾರ್ಗದರ್ಶಕರಾದ ಮರಿಕಾಪು ಲಕ್ಷ್ಮೀನಾರಾಯಣ ಹೊಳ್ಳ ಕರೆ ನೀಡಿದರು.
ಕೆ.ಟಿ ಸುವರ್ಣ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕರು, ಚಂದ್ರಹಾಸ ಅಡ್ಯಂತಾಯ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕೇಸರರು, ವರ್ಕಾಡಿ ಕೊಂಡೆಯೂರು ಅನಂತ ಪದ್ಮನಾಭ ದೇವಸ್ಥಾನದ ಮುಖ್ಯಸ್ಥರಾದ ಸೋಮನಾಥ ಕಾರಂತ ಮರಿಕಾಪು, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಗಿರೀಶ್ ಆಳ್ವ ಮೋರ್ಲ, ಇಳಾ ಶಂಕರ್ ಭಟ್ ಸರ್ಕುಡೇಲು, ಪ್ರಸನ್ನ ಪಕ್ಕಳ ಬಲೆತೋಡು , ಹರೀಶ್ ಇರಾ, ಪತ್ರಕರ್ತ ಜಗನ್ನಾಥ ಶೆಟ್ಟಿ ಪಾವುಲ, ಪ್ರಭಾಕರ ರೈ ಕಲ್ಪನೆ, ಹರೀಶ್ ಕನ್ನಿಗುಳಿ, ನವೀನ್ ಶೆಟ್ಟಿ ಮಂಗಲಪಾಡಿ, ದಿನೇಶ್ ಕೊಂದಲ ಕುಮೇರ್ ಮುಖ್ಯ ಅತಿಥಿಗಳಾಗಿದ್ದರು.

ಕಿಶೋರ್ ನಾಯ್ಕ್ ವರ್ಕಾಡಿ, ಆನಂದ ಆಚಾರಿ, ಶಶಿಧರ್ ನಾಯ್ಕ್ ಬಜಿಲಕರಿಯ, ರಮೇಶ್ ಮೋರ್ಲ, ಶಶಿಕಿರಣ್ ಬೋಳ, ಜಿತೇಶ್ ಶೆಟ್ಟಿ ಪೂಂಜರಮನೆ, ಆನಂದ ಬೆಲ್ಚಡ ನೀರೊಳಿಕೆ, ಪುನೀತ್ ಶೆಟ್ಟಿ, ಶೇಕರ ತೋಕೆ, ಪ್ರತಿಭಾ ದಿನೇಶ್, ರೇಷ್ಮಾ ಜಯಪ್ರಕಾಶ್ ಶೆಟ್ಟಿ, ಲಲಿತಾ ಶಾಂತಿಪಲಿಕೆ, ಚಿತ್ರ ಮುಡೂರು ಮೊದಲಾದವರು ಉಪಸ್ಥಿತರಿದ್ದರು.
ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿ, ಶಿವರಾಜ್ ಕಾರ್ಯಕ್ರಮ ನಿರ್ವಹಿಸಿದರು.

