ಲಯನ್ಸ್ ಕ್ಲಬ್ ಪಂಪ್‌ವೆಲ್ ಕಲ್ಪವೃಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಂಗಳೂರು: ಲಯನ್ಸ್ ಕ್ಲಬ್ ಪಂಪ್‌ವೆಲ್ ಕಲ್ಪವೃಕ್ಷದ 2026–27ನೇ ಲಯನ್ಸ್ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 9ರಂದು ಕದ್ರಿಯ ಅಶೋಕ್ ಸೇವಾ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ಲಯನ್ ಅರುಣ್ ಶೆಟ್ಟಿ ಅವರು ಪದಗ್ರಹಣ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿದರು.

2026–27ನೇ ಸಾಲಿನ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಲಯನ್ ಸನ್ಮತ್ ಹೆಗ್ಡೆ, ಕಾರ್ಯದರ್ಶಿಯಾಗಿ ಲಯನ್ ಮಹಾಬಲ ಆಳ್ವ ಹಾಗೂ ಖಜಾಂಚಿಯಾಗಿ ಲಯನ್ ಪ್ರಶಾಂತ್ ಆಳ್ವ ಅಧಿಕಾರ ಸ್ವೀಕರಿಸಿದರು.

ಲಿಯೋ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಶ್ರೀ ಧನುಷ್ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೀ ವಿಘ್ನೇಶ್ ಶೆಟ್ಟಿ ಹಾಗೂ ಖಜಾಂಚಿಯಾಗಿ ಶ್ರೀ ನಿಶಿಲ್ ಶೆಟ್ಟಿ ಪದಗ್ರಹಣ ಮಾಡಿದರು.

ಕ್ಲಬ್ಬಿನ ನಿರ್ಗಮಿತ ಅಧ್ಯಕ್ಷ ಲಯನ್ ಉಮೇಶ್ ಅಧಿಕಾರಿ ಅವರು ಸ್ವಾಗತ ಭಾಷಣ ಮಾಡಿದರು. ಲಯನ್ ರಾಜೇಶ್ ಶೆಟ್ಟಿ ಶಬರಿ ಅವರು ಪದಗ್ರಹಣಾಧಿಕಾರಿ ಲಯನ್ ಅರುಣ್ ಶೆಟ್ಟಿ ಹಾಗೂ ಅವರ ಕುಟುಂಬದವರನ್ನು ಸಭೆಗೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ 2026–27ನೇ ಸಾಲಿನಲ್ಲಿ ಆಯೋಜಿಸಲಾದ ಸುಮಾರು ₹1.50 ಲಕ್ಷ ಮೌಲ್ಯದ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮದ ವಿವರ ನೀಡಲಾಯಿತು. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಬಡ ಕುಟುಂಬಗಳಿಗೆ ನೆರವು ಹಾಗೂ ಯುವಜನರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

ಕಾರ್ಯಕ್ರಮವನ್ನು ಲಯನ್ ಮೋಹನದಾಸ್ ಕಿಲ್ಲೆ ಅವರು ನಿರೂಪಿಸಿದರು. ಖಜಾಂಚಿ ಲಯನ್ ಪ್ರಶಾಂತ್ ಆಳ್ವ ವಂದನಾರ್ಪಣೆ ಸಲ್ಲಿಸಿದರು.

ಸಮಾರಂಭದಲ್ಲಿ ಲಯನ್ಸ್ ಹಾಗೂ ಲಿಯೋ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಆಹ್ವಾನಿತ ಅತಿಥಿಗಳು ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!