ವಿಚಿತ್ರ ಕಳ್ಳತನ: ₹1,500 ಕದ್ದ ಕಳ್ಳ, ದಾಖಲೆಗಳಿದ್ದ ಪರ್ಸ್ ಅಂಚೆಪೆಟ್ಟಿಗೆಯಲ್ಲಿ ಹಾಕಿದ

ಕಾಸರಗೋಡು : ಪಯ್ಯನ್ನೂರಿನಲ್ಲಿ ವಿಚಿತ್ರ ಕಳ್ಳತನವೊಂದು ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನೀಲೇಶ್ವರ ಮೂಲದ ರಾಜೀವನ್ ಎಂಬುವರ ಪರ್ಸ್ ಅನ್ನು ಕಳ್ಳನೊಬ್ಬ ಎಗರಿಸಿದ್ದಾನೆ.

ಪರ್ಸ್‌ನಲ್ಲಿದ್ದ 1,500 ರೂಪಾಯಿ ನಗದನ್ನು ಮಾತ್ರ ತಾನು ಇಟ್ಟುಕೊಂಡು, ಎಟಿಎಂ, ಪ್ಯಾನ್ ಮತ್ತು ಇತರ ಪ್ರಮುಖ ದಾಖಲೆಗಳಿದ್ದ ಪರ್ಸ್ ಅನ್ನು 25 ಕಿ.ಮೀ ದೂರದ ಚೆರುಪುಳ ಅಂಚೆ ಪೆಟ್ಟಿಗೆಯಲ್ಲಿ ಹಾಕಿದ್ದಾನೆ.

​ಅಂಚೆ ನೌಕರರು ಈ ಪರ್ಸ್ ಅನ್ನು ಕಂಡುಹಿಡಿದು, ಅದರಲ್ಲಿದ್ದ ವಿಳಾಸದ ಆಧಾರದ ಮೇಲೆ ಮಾಲೀಕ ರಾಜೀವನ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಸೋಮವಾರ ಬೆಳಿಗ್ಗೆ ಬಂದು ತಮ್ಮ ಪರ್ಸ್ ಪಡೆದುಕೊಳ್ಳುವುದಾಗಿ ರಾಜೀವನ್ ತಿಳಿಸಿದ್ದಾರೆ. ಹಣ ಕಳೆದುಕೊಂಡಿದ್ದರೂ ಪ್ರಮುಖ ದಾಖಲೆಗಳು ಮರಳಿ ಸಿಕ್ಕಿರುವುದು ನಿರಾಳ ತಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!